
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟಿಕೆಟ್ ದರವನ್ನು ನಾಲ್ಕು ದಿನಗಳ ಕಾಲ ಇಳಿಕೆ ಮಾಡಲಾಗಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನವೆಂಬರ್ 7 ರಿಂದ 10ರವರೆಗೆ ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ‘ಗಂಧದ ಗುಡಿ’ ಟಿಕೆಟ್ ದರ ಇಳಿಕೆ ಮಾಡಲಾಗಿದೆ ಮಲ್ಟಿಪ್ಲೆಕ್ಸ್ ನಲ್ಲಿ 112 ರೂ., ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 56 ರೂ. ಟಿಕೆಟ್ ದರದಲ್ಲಿ ಎಲ್ಲಾ ಶೋಗಳಲ್ಲಿ ‘ಗಂಧದ ಗುಡಿ’ ಪ್ರದರ್ಶನ ಇರಲಿದೆ.
ಈ ಮೂಲಕ ಇಂದಿನಿಂದ ಗುರುವಾರದವರಿಗೆ ‘ಗಂಧದ ಗುಡಿ’ ಟಿಕೆಟ್ ದರ ಇಳಿಕೆ ಮಾಡಲಿದ್ದು, ಮಕ್ಕಳು ಸೇರಿದಂತೆ ಎಲ್ಲಾ ಕನ್ನಡಿಗರಿಗೆ ಸಾಕ್ಷ್ಯ ಚಿತ್ರ ತೋರಿಸಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ದಿನದ ಎಲ್ಲಾ ಶೋಗಳಲ್ಲಿ ಈ ಟಿಕೆಟ್ ದರದಲ್ಲಿ ‘ಗಂಧದ ಗುಡಿ’ ಪ್ರದರ್ಶನ ಕಾಣಲಿದೆ.