alex Certify ಬೆರಗಾಗಿಸುತ್ತೆ ನಟ ಅಕ್ಷಯ್ ಕುಮಾರ್ ವಾರ್ಷಿಕ ಗಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ನಟ ಅಕ್ಷಯ್ ಕುಮಾರ್ ವಾರ್ಷಿಕ ಗಳಿಕೆ

ಫೋರ್ಬ್ಸ್ ನಿಯತಕಾಲಿಕೆಯು ಅತಿ ಹೆಚ್ಚು ಗಳಿಕೆಯ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೈಲಿ ಜೆನ್ನರ್ ಅಗ್ರಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಬಾಲಿವುಡ್ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೊನಾಸ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  ಫೋರ್ಬ್ಸ್ ಪಟ್ಟಿಯಲ್ಲಿ ಕಿಮ್ ಕರ್ದಶಿಯಾನ್ ಅವರ ಅಕ್ಕ ಕೈಲಿ ಜೆನ್ನರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ಕಳೆದ 12 ತಿಂಗಳಲ್ಲಿ 590 ಮಿಲಿಯನ್ ಡಾಲರ್ ಗಳಿಸಿದ್ದಾರೆ.  ಕಿಮ್ ಕರ್ದಶಿಯಾನ್ ಅವರ ಪತಿ ಕಾನ್ಯೆ ವೆಸ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಕಿಮ್ ಈ ಪಟ್ಟಿಯಲ್ಲಿ 48 ನೇ ಸ್ಥಾನದಲ್ಲಿದ್ದಾರೆ.

ಪ್ರಸಿದ್ಧ ಟೆನಿಸ್ ಆಟಗಾರ ರೋಜರ್ ಫೆಡರರ್ ಫೋರ್ಬ್ಸ್ 2020 ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ನೊವಾಕ್ ಜೊಕೊವಿಕ್ 68 ನೇ ಸ್ಥಾನದಲ್ಲಿದ್ದಾರೆ. ರಾಫೆಲ್ ನಡಾಲ್  80 ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ 48.5 ಮಿಲಿಯನ್ ಡಾಲರ್ ಗಳೊಂದಿಗೆ ಈ ಪಟ್ಟಿಯಲ್ಲಿ 52 ನೇ ಸ್ಥಾನದಲ್ಲಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...