ಕೊರೋನಾ ಸಾಂಕ್ರಾಮಿಕ ರೋಗ ಹರಡಿದ ಬಳಿಕ ವ್ಯಾವಹಾರಿಕವಾಗಿ ಹೊಸ ಹೊಸ ಚಿಂತನಾ ಕ್ರಮಗಳು ಅನುಷ್ಠಾನವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವ ಹಿನ್ನೆಲೆ ಬಹುತೇಕ ರಾಷ್ಟ್ರಗಳಲ್ಲಿ ಈವರೆಗೂ ಚಿತ್ರಮಂದಿರ ತೆರೆದಿಲ್ಲ. ಇದೀಗ ಪ್ಯಾರಿಸ್‌ನಲ್ಲಿ ಚಿತ್ರಮಂದಿರವೊಂದು ಗಮನ ಸೆಳೆಯುತ್ತಿದೆ.
ಇದು ತೇಲುವ ಚಿತ್ರಮಂದಿರ ವೀಕ್ಷಕರು ಬೋಟ್ ನಲ್ಲಿ ಕೂತು ಸಿನಿಮಾವನ್ನು ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಜುಲೈ 18ರಂದು ಅಲ್ಲಿನ ಸೀನ್ ನದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಚಲನಚಿತ್ರ ವೀಕ್ಷಿಸುವ ಪ್ರಯತ್ನ ಅನುಷ್ಠಾನಕ್ಕೆ ಬರುತ್ತಿದೆ.
ಚಿತ್ರರಂಗದ ಉತ್ಸಾಹಿಗಳು 38 ಎಲೆಕ್ಟ್ರಿಕ್ ಬೋಟುಗಳನ್ನು ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ, ಪ್ರತಿ ದೋಣಿಯಲ್ಲಿ ಆರು ಜನರನ್ನು ಕೂರಿಸಿಕೊಳ್ಳಬಹುದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೂ ಸಹ ವ್ಯವಸ್ಥೆ ಮಾಡಲಾಗಿದೆ.