
ಬಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಫ್ಯಾಶನ್ ಸ್ಟೇಟ್‌ಮೆಂಟ್ ಮೂಲಕ ಹೆಸರಾಗಿದ್ದಾರೆ ಕರೀನಾ ಕಪೂರ್. ಆಕೆ ಧರಿಸುವ ಪ್ರತಿಯೊಂದು ಕಾಸ್ಟ್ಯೂಮ್ ಸಹ ಒಂದೊಂದು ಸ್ಟೈಲ್ ಸ್ಟೇಟ್‌ಮೆಂಟ್ ಎನ್ನುವಂತಿದೆ.
ಕರೀನಾ ಯಾವಾಗಲೂ ಭಾರೀ ಲ್ಯಾವಿಶ್ ಬದುಕು ನಡೆಸುವ ಮೂಲಕವೂ ಖ್ಯಾತಿ ಪಡೆದವರು. ಇತ್ತೀಚೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಆಕೆ ತನ್ನ ಕಸಿನ್ ಅರ್ಮಾನ್ ಜೈನ್ ಹಾಗೂ ಅನಿಸ್ಸಾ ಮಲ್ಹೋತ್ರಾರ ರೋಕಾ ಕಾರ್ಯಕ್ರಮವೊಂದಕ್ಕೆ ರೆಡಿಯಾಗಲು ವಿಮಾನ ನಿಲ್ದಾಣದಲ್ಲೇ ವ್ಯಾನಿಟಿ ಮಾಡಿಕೊಂಡಿದ್ದಾರೆ.
ಬೇಬೋ ಎಂದು ಹೆಸರಾಗಿರುವ ಕರೀನಾ ವಿಮಾನ ನಿಲ್ದಾಣದಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
https://www.instagram.com/p/B6DiAailSGi/?utm_source=ig_web_copy_link