ಭಾರತದಲ್ಲಿ ಮದುವೆ ಅಂದ್ರೆ ವಿಶೇಷವಾದ ಪ್ರಾಶಸ್ತ್ಯವಿದೆ. ಹಿಂದಿನಿಂದ ಬಂದಂತಹ ಆಚರಣೆಯ ಪದ್ಧತಿಗಳನ್ನು ಇಂದಿಗೂ ಮಾಡುತ್ತಾರೆ. ತಮ್ಮ ಶಾಸ್ತ್ರ- ಸಂಪ್ರದಾಯವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಧು-ವರರು ಹಳೆ ಆಚರಣೆ ಜೊತೆಗೆ ಆಧುನಿಕತೆಯ ಬಗ್ಗೆ ಹೆಚ್ಚಿನ ಒಲವು ಹೊಂದಿರುತ್ತಾರೆ. ಅಲ್ಲದೆ ತಮ್ಮ ಮದುವೆ ದಿನದಂದು ಜಾಗೃತಿ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುತ್ತಾರೆ.
ಹಾಗೆಯೇ ಇಲ್ಲೊಬ್ಬ ವಧುವು ತನ್ನ ಮದುವೆ ದಿನ ಫಿಟ್ನೆಸ್ ಜಾಗೃತಿ ಮೂಡಿಸಿದ್ದಾಳೆ.
ಹೌದು, ಭಾರತೀಯ ವಧುವೊಬ್ಬಳು ಲೆಹೆಂಗಾ, ಜ್ಯುವೆಲ್ಲರಿ ಧರಿಸಿ ಪುಶ್ ಅಪ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಜೊತೆಗೆ ವ್ಯಾಯಾಮ ಮಾಡಲು ಜನರಿಗೆ ಸ್ಪೂರ್ತಿ ತುಂಬಿದ್ದಾಳೆ. ಸಾಂಪ್ರದಾಯಿಕ ಉಡುಪಿನ ಜೊತೆಗೆ ಆಭರಣ ಧರಿಸಿ, ಈಕೆ ಮಾಡಿರುವ ಪುಶ್ ಅಪ್ ನೋಡಿದ ಜನ ವ್ಹಾವ್ ಅಂದಿದ್ದಾರೆ.
ಭಾರತ-ಇಂಗ್ಲೆಂಡ್ ಟೆಸ್ಟ್: ದಾಖಲೆ ಬರೆಯುವ ಹಾದಿಯಲ್ಲಿ ಶಮಿ
ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ವಧುವಿನ ಪುಶ್ ಅಪ್ ನೋಡಿದ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.
https://www.youtube.com/watch?v=LuaQfayDfsY