ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ 2020ರಲ್ಲಿ ಸಾಮಾನ್ಯ ಜನರ ಹಾಲಿಡೇ ಪ್ಲಾನ್ ಎಲ್ಲಾ ಹಳ್ಳ ಹಿಡಿದು ಬಿಟ್ಟಿವೆ. ಇತ್ತೀಚೆಗೆ ಸ್ವಲ್ಪ ಪರಿಸ್ಥಿತಿ ತಿಳಿಯಾಗಿದ್ದು, ಮಾಸ್ಕ್‌ಗಳು, ಮುಖದ ಶೀಲ್ಡ್‌ಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜನರು ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಪರಿವಾರದೊಂದಿಗೆ ಇದೇ ಸಂದರ್ಭದಲ್ಲಿ ಗೋವಾಗೆ ಹಾಲಿಡೇ ಮಾಡಲು ತೆರಳಿದ್ದಾರೆ. ಮಗಳು ಶಮಿಶಾ ಶೆಟ್ಟಿ ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಕ್ಕೆ ತೆರಳಿರುವ ಶಿಲ್ಪಾ ಫ್ಯಾಮಿಲಿ ತಮ್ಮ ಖಾಸಗೀ ಜೆಟ್‌ನಲ್ಲಿ ಪ್ರವಾಸಕ್ಕೆ ಹೊರಟಿದೆ.
ಪ್ರವಾಸಕ್ಕೆ ಹೋಗುವ ಮುನ್ನ ತಮ್ಮ ಖಾಸಗಿ ಜೆಟ್ ಮುಂದೆ ನಿಂತುಕೊಂಡಿರುವ ಶಿಲ್ಪಾ ಫ್ಯಾಮಿಲಿ ಹಾಗೂ ಆಕೆಯ ಸಹೋದರಿ ಶಮಿತಾ ಹಾಗೂ ತಾಯಿ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡಿದೆ. ಈ ಚಿತ್ರವನ್ನು ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.instagram.com/p/CJA8OaJgmrk/?utm_source=ig_web_copy_link
https://www.instagram.com/p/CJAiX-5heHC/?utm_source=ig_web_copy_link