alex Certify BIG BREAKING: ನಕಲಿ ದಾಖಲೆ ಸೃಷ್ಠಿಸಿ ನಟ ದರ್ಶನ್ ಗೆ 25 ಕೋಟಿ ವಂಚಿಸಲು ಯತ್ನಿಸಿದ ಮೂವರ ವಿರುದ್ಧ ಎಫ್ಐಆರ್, ಮಹಿಳೆ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನಕಲಿ ದಾಖಲೆ ಸೃಷ್ಠಿಸಿ ನಟ ದರ್ಶನ್ ಗೆ 25 ಕೋಟಿ ವಂಚಿಸಲು ಯತ್ನಿಸಿದ ಮೂವರ ವಿರುದ್ಧ ಎಫ್ಐಆರ್, ಮಹಿಳೆ ವಶಕ್ಕೆ

ಮೈಸೂರು: ನಟ ದರ್ಶನ್ ಅವರಿಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ತಾನು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ದರ್ಶನ್ ಭೇಟಿಗೆ ಬಂದಿದ್ದ ಅರುಣಕುಮಾರಿ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದರ್ಶನ್ ಸ್ನೇಹಿತರು ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.

ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಮೂಲದ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ್ ಆರೋಪಿಗಳಾಗಿದ್ದು, ದರ್ಶನ್ ಸ್ನೇಹಿತ ಹರ್ಷ ಅವರು ದೂರು ನೀಡಿದ್ದಾರೆ.

ತಾವು ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿರುವ ಕೆನರಾ ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದ ಆರೋಪಿಗಳು ನಕಲಿ ದಾಖಲೆ ಸೃಷ್ಠಿಸಿ ದರ್ಶನ್ ಶ್ಯೂರಿಟಿಯೊಂದಿಗೆ ಸ್ನೇಹಿತರ ಹೆಸರಲ್ಲಿ 25 ಕೋಟಿ ರೂ. ಸಾಲ ಪಡೆದು ವಂಚಿಸಲು ಯತ್ನಿಸಿದ್ದರೆನ್ನಲಾಗಿದೆ. ಆದರೆ, ದರ್ಶನ್ ಅವರಾಗಲಿ, ಸ್ನೇಹಿತರಾಗಲಿ ಲೋನ್ ಗೆ ಅರ್ಜಿ ಹಾಕಿಲ್ಲ. ಹಣಕಾಸು ವ್ಯವಹಾರವೂ ನಡೆದಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಎಸಿಪಿ ಕಚೇರಿಗೆ ಆಗಮಿಸಿದ ದರ್ಶನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...