ನವದೆಹಲಿ: 80 ಕ್ಕೂ ಹೆಚ್ಚು ಜನರ ವಂಚಿಸಿದ ಆರೋಪದ ಮೇಲೆ ಚಲನಚಿತ್ರ ನಿರ್ಮಾಪಕನನ್ನು ಬಂಧಿಸಲಾಗಿದೆ. ಚಂಡಿಗಢದಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಚಂದ್ರಕಾಂತ್ ಶರ್ಮಾ ಎಂಬ ಸಿನಿಮಾ ನಿರ್ಮಾಪಕನನ್ನು ಬಂಧಿಸಿದ್ದಾರೆ.
ಈತನ ವಿರುದ್ಧ 88 ಕ್ಕೂ ಹೆಚ್ಚು ವಂಚನೆ ದೂರು ದಾಖಲಾಗಿವೆ. ಸಿನಿ ಮಿರ್ಚಿ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದ ಚಂದ್ರಕಾಂತ್ ಶರ್ಮಾ, ತಮ್ಮ ಕಂಪನಿಯು ಮನರಂಜನಾ ವಲಯ, ಇತರೆ ವಲಯದಲ್ಲಿ ಹೂಡಿಕೆ ಯೋಜನೆ ಹೊಂದಿದೆ ಎಂದು ಹಣ ಹೂಡಿಕೆ ಮಾಡಿಸಿಕೊಂಡಿದ್ದಾನೆ.
ಶೇಕಡ 70ರಷ್ಟು ಹೆಚ್ಚಿನ ಆದಾಯ ನೀಡುವುದಾಗಿ ಹಣ ಸಂಗ್ರಹಿಸುತ್ತಿದ್ದ ಚಂದ್ರಕಾಂತ್ ಶರ್ಮಾ ಏಕಾಏಕಿ ನಜಾಫ್ ಗಢ ನಿವಾಸ ಮತ್ತು ದ್ವಾರಕಾ ಮೂಲದ ಕಚೇರಿಯನ್ನು ಖಾಲಿ ಮಾಡಿ ಪರಾರಿಯಾಗಿದ್ದ.
ಈತನ ವಿರುದ್ಧ 80 ಕ್ಕೂ ಹೆಚ್ಚು ದೂರು ದಾಖಲಾಗಿವೆ. ಭಾನುವಾರ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಿನಿ ಮಿರ್ಚಿ ಪ್ರೊಡಕ್ಷನ್ ಮೂಲಕ ಕಳೆದ ವರ್ಷ ಬಿಡುಗಡೆಯಾದ ‘ದಿ ಗ್ರೇಟ್ ಇಂಡಿಯನ್ ಕ್ಯಾಸಿನೋ’, ಬಿಡುಗಡೆಯಾಗಬೇಕಿರುವ ‘ಲಸ್ಟ್ ವಾಲಾ ಲವ್’ ಎನ್ನುವ ಸಿನಿಮಾ ನಿರ್ಮಾಣ ಮಾಡಲಾಗಿದೆ.