ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ನಮ್ಮನಗಲಿ ಒಂದು ವರ್ಷವಾಗಿದ್ದು, ಈ ಸಂದರ್ಭದಲ್ಲಿ ಅವರ ಒಡನಾಡಿಗಳು, ಸಿನಿಮಾ, ಸಂಗೀತ ಲೋಕದ ದಿಗ್ಗಜರು, ಕಲಾವಿದರು, ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ.
ಗಾಯನ, ನಟನೆ ಮೂಲಕ ಎಸ್.ಪಿ.ಬಿ. ಅಭಿಮಾನಿಗಳ ಮನಸೂರೆಗೊಂಡಿದ್ದರು. ಅಸಂಖ್ಯಾತ ಹಾಡುಗಳ ಒಡೆಯರಾದ ಅವರು ಅನೇಕ ಯುವ ಕಲಾವಿದರಿಗೆ ಪ್ರೋತ್ಸಾಹ, ಅವಕಾಶ ನೀಡಿದ್ದರು. ಸಂಗೀತ ಕಾರ್ಯಕ್ರಮ, ರಿಯಾಲಿಟಿ ಶೋಗಳ ಮೂಲಕ ಸಂಗೀತದ ಧಾರೆ ಎರರೆದಿದ್ದರು. ವ್ಯಕ್ತಿಯಾಗಿಯೂ ಆದರ್ಶಪ್ರಾಯರಾಗಿದ್ದರು.
ಕಳೆದ ವರ್ಷ ಆಗಸ್ಟ್ ನಲ್ಲಿ ಕೊರೋನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 25 ರಂದು ಕೊನೆಯುಸಿರೆಳೆದಿದ್ದರು. ಆದರೆ, ಅವರ ಹಾಡುಗಳ ಮೂಲಕ ಜೀವಂತವಾಗಿದ್ದಾರೆ ಎಂದು ಸಂಗೀತ ಲೋಕದ ದಿಗ್ಗಜರು ಹೇಳಿದ್ದಾರೆ.
ಎಸ್.ಪಿ.ಬಿ. ಸಂಗೀತದ ವಿಶ್ವವಿದ್ಯಾಲಯದಂತಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ 16 ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.
https://youtu.be/J5OXQsTLLHw