ಬಾಲಿವುಡ್ ನಟಿ ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಫೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು, ಆಕೆ ವಿರುದ್ಧ ನೆಟ್ಟಿಗರು ಮುಗಿಬಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಖಿ ಪಾಕಿಸ್ತಾನ ಧ್ವಜ ಹಿಡಿದ ಫೋಟೋ ಫೇಸ್ ಬುಕ್ ನಲ್ಲಿ ಮೊದಲು ಅಪ್ ಲೋಡ್ ಆಗಿತ್ತು. ಹಿಂದಿಯಲ್ಲಿ “ಇದು ರಾಖಿ ಸಾವಂತ್ ನಿಜ ಬಣ್ಣ. ಆಕೆ ಭಾರತೀಯರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆʼʼ ಎಂದು ಬರೆಯಲಾಗಿತ್ತು. ಆ ಪೋಸ್ಟ್ ಎಲ್ಲ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ನೆಟ್ಟಿಗರು ಸಾವಂತ್ ರನ್ನು ಪಾಕಿಸ್ತಾನಕ್ಕೆ ಕಳಿಸುವವರೆಗೂ ಮಾತನಾಡಿದ್ದರು. ಮೂಲ ಪೋಸ್ಟ್ ಈಗ ಡಿಲಿಟ್ ಆಗಿಬಿಟ್ಟಿದೆ. ಸದ್ಯ ಯಾರೋ ಸಂಗ್ರಹಿಸಿದ ಸ್ಕೀನ್ ಶಾಟ್ ಇಲ್ಲಿದೆ.
ಆದರೆ, ಕೆಲವು ನೆಟ್ಟಿಗರ ಆರೋಪ ಸತ್ಯವಲ್ಲ. ರಾಖಿ ಪಾಕಿಸ್ತಾನದ ಧ್ವಜ ಹಿಡಿದು ಫೋಸ್ ನೀಡಿದ ಫೋಟೋಗಳನ್ನು 2019 ರಲ್ಲಿ ಸ್ವತಃ ಟ್ವೀಟ್ ಮಾಡಿದ್ದರು. ನಾನು ಭಾರತವನ್ನು ಪ್ರೀತಿಸುತ್ತೇನೆ. ಗೌರವಿಸುತ್ತೇನೆ. ಇದು ಒಂದು ಚಿತ್ರದ ಶೂಟಿಂಗ್ ಗಾಗಿ ಒಂದು ಪಾತ್ರವಾಗಿ ನಾನು ಹೀಗೆ ಮಾಡಬೇಕಾಗಿದೆ ಎಂದು ಕ್ಯಾಪ್ಶನ್ ನಲ್ಲಿ ತಿಳಿಸಿದ್ದರು. ಕಾಶ್ಮೀರಿ ಪಂಡಿತರನ್ನು ಪಾಕಿಸ್ತಾನದ ಪರ ಸೆಳೆಯುವ ಸನ್ನಿವೇಶವುಳ್ಳ ಜಿಹಾದಿ ಕನ್ಯೆಯ ಪಾತ್ರ ಹಾಗೂ ಐಟಂ ಸಾಂಗ್ ಮಾಡುತ್ತಿದ್ದೇನೆ ಎಂದು ಹೇಳಿದ ವಿಡಿಯೋವೂ ಟ್ವಿಟರ್ ನಲ್ಲಿದೆ.
https://www.instagram.com/p/BxMf7c2FKRY/?utm_source=ig_embed
https://www.instagram.com/p/BxMgTZ5FvIJ/?utm_source=ig_embed