ಅಸ್ಸಾಂನಲ್ಲಿ ಭಾರಿ ಮಳೆಗೆ ಸಂಭವಿಸಿರುವ ಪ್ರವಾಹದಿಂದ ಅಲ್ಲಿನ ಜನರು ತತ್ತರಿಸಿದ್ದಾರೆ. ಆದರೆ ಈ ಸಂಕಷ್ಟ ಸಮಯದಲ್ಲಿಯೂ 71 ವರ್ಷದ ಗಾಯಕರೊಬ್ಬರು ಗಿಟಾರ್ ಹಿಡಿದು ಹಾಡಿರುವ ವಿಡಿಯೋ ವೈರಲ್ ಆಗಿದೆ.
71 ವರ್ಷದ ಸೈಯದ್ ಸಾದುಲ್ ಅವರು ತಮ್ಮ ಮನೆಯಲ್ಲಿ ಹಾಡನ್ನು ಹಾಡಿದ್ದು, ಮೊಣಕಾಲು ಮಟ್ಟಕ್ಕೆ ನೀರು ನಿಂತುಕೊಂಡಿದೆ. ಆಲ್ ಇಂಡಿಯಾ ರೆಡಿಯೋದಲ್ಲಿ ಕಲಾವಿದರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ಇದೀಗ ಅಸ್ಸಾಂಗೆ ಬಂದಿರುವ ಪ್ರವಾಹವನ್ನು ಎದುರಿಸುವಂತೆ ಅಸ್ಸಾಮಿ ಹಾಡಿನ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನು ಸೈಯದ್ ಮಾಡಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಲಾವಿದನ ಹಾಡಿನ ಶೈಲಿ ಹಾಗೂ ಜನರಿಗೆ ತುಂಬುತ್ತಿರುವ ವಿಶ್ವಾಸದ ಮಾತುಗಳಿಗೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
https://www.instagram.com/tv/CB85du7nwlw/?utm_source=ig_embed