‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಮತ್ತು ‘ಪದ್ಮಾವತ್’ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ ಒಂದೇ ಚಿತ್ರದಲ್ಲಿ ನಟಿಸುವ ಕುರಿತಾಗಿ ವೈಜಯಂತಿ ಮೂವೀಸ್ ಅಧಿಕೃತ ಘೋಷಣೆ ಮಾಡಿದೆ.
ತೆಲುಗು ಚಿತ್ರದ ಖ್ಯಾತ ನಿರ್ಮಾಣ ಸಂಸ್ಥೆಯಾಗಿರುವ ವೈಜಯಂತಿ ಮೂವೀಸ್ ನಿರ್ಮಾಣ ಮಾಡಲಿರುವ ‘ಪ್ರಭಾಸ್ 21’ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಚಿತ್ರವನ್ನು ‘ಮಹಾನಟಿ’ ಖ್ಯಾತಿಯ ನಿರ್ದೇಶಕ ನಾಗನಾಗ್ ಅಶ್ವಿನ್ ನಿರ್ದೇಶಿಸಲಿದ್ದಾರೆ. ವೈಜಯಂತಿ ಮೂವೀಸ್ 50ನೇ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಉಡುಗೊರೆ ಇದಾಗಿದ್ದು ಹೈ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಲಿದೆ.