ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜಕೀಯಕ್ಕೆ ಬರುವ ಮುನ್ನ ಸಿನೆಮಾ ಹಾಗೂ ಮಾಡೆಲಿಂಗ್ ನಲ್ಲಿ ಇದ್ದರು ಎಂದು ಬಹುತೇಕ ಜನರಿಗೆ ಗೊತ್ತಿರುವ ವಿಚಾರ. ಅವರ ಆಪ್ತ ಸ್ನೇಹಿತೆ ಎಕ್ತಾ ಕಪೂರ್ ಇದೀಗ ಒಂದು ಥ್ರೋಬ್ಯಾಕ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ತಮ್ಮ 21ನೇ ವಯಸ್ಸಿನಲ್ಲಿ ಮಿಸ್ ಇಂಡಿಯಾ ಸ್ಪರ್ಧಿಯಾಗಿದ್ದ ಇರಾನಿ, ರ‍್ಯಾಂಪ್ ಮೇಲೆ ಮಾತನಾಡುವ ವೇಳೆ, “ನಾನು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದೇನೆ ಹಾಗೂ ನನಗೆ ಸಾಹಸ ಕ್ರೀಡೆಗಳು ಇಷ್ಟ” ಎಂದು ಹೇಳುತ್ತಿರುವ ವಿಡಿಯೋವನ್ನು ಎಕ್ತಾ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ.
“ಬಹು ಸಂಸ್ಕೃತಿ ಹಾಗೂ ಧರ್ಮಗಳ ತೊಟ್ಟಿಲಾದ ಭಾರತದ ಬಗ್ಗೆ ನನಗೆ ಅಪಾರ ಆಸಕ್ತ ಇದೆ. ಹಾಗಾಗಿ ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂದು ಬಿಡಿಸಿ ಹೇಳುವ ಪ್ರಮೇಯವೇ ಇಲ್ಲ” ಎಂದು ಸ್ಮೃತಿ ಇದೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಎಕ್ತಾ ಕಪೂರ್ ರ ’ಕ್ಯೂಂಕಿ… ಸಾಸ್ ಭೀ ಕಭಿ ಬಹು ಥೀ” ಧಾರಾವಾಹಿ ಸರಣಿಯಲ್ಲಿ ತುಳಸಿ ವಿರಾಣಿ ಪಾತ್ರದ ಮೂಲಕ ಸ್ಮೃತಿ ಮನೆ ಮನೆ ಮಾತಾಗಿದ್ದರು.
https://www.instagram.com/p/CB5Bqh2g66R/?utm_source=ig_embed