
ದಸರಾ ಪ್ರಯುಕ್ತ ದೊಡ್ಡ ತಾರಾ ನಟರೆಲ್ಲಾ ಸೇರಿಕೊಂಡು ಅಯೋಧ್ಯೆಯಲ್ಲಿ ರಾಮ್‌ಲೀಲಾ ಹಮ್ಮಿಕೊಂಡಿದ್ದಾರೆ. ಕೋವಿಡ್-19 ಕಾರಣದಿಂದ ರಾಮ್‌ಲೀಲಾವನ್ನು ದೇಶಾದ್ಯಂತ ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ಈ ನಾಟಕದ ದೃಶ್ಯವೊಂದರಲ್ಲಿ ಅಂಗದನನ್ನು ಟೀಕಿಸುವ ಸನ್ನಿವೇಶದಲ್ಲಿ ಡೈಲಾಗ್ ನಡುವೆಯೇ ಮನೋಜ್ ತಿವಾರಿ ’ಏಕ್ ಸೆಕೆಂಡ್ ಏಕ್ ಸೆಕೆಂಡ್’ ಎನ್ನುತ್ತಿರುವುದು ವೈರಲ್ ಆಗಿಬಿಟ್ಟಿದೆ.
ಈ ತುಣುಕನ್ನು ಕಟ್ ಮಾಡಿ, ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದ್ದು, ಸಾಕಷ್ಟು ವಿನೋದಮಯ ಕಾಮೆಂಟ್‌ಗಳು ಹರಿದುಬಂದಿವೆ.
ರಾವಣನ ಪಾತ್ರಧಾರಿ ಶಹಬಾಝ್ ಖಾನ್ ಜೊತೆಗೆ ಮಾತನಾಡುತ್ತಾ, “ಏಕ್ ಏಕ್ ಸೆಕೆಂಡ್. ಆ ಕಪಿ ಬಂದು ಲಂಕೆಗೆ ಬೆಂಕಿ ಇಟ್ಟು ಹೊರಟುಹೋಗಿದ್ದಾನೆ. ನನಗೆ ಘೋರ ಆಶ್ಚರ್ಯವಾಗುತ್ತಿದೆ. ಆತ ನಮ್ಮ ಟೀಂನ ಪುಟ್ಟ ಕಪಿ. ಏನೆಲ್ಲಾ ಮಾಡಿಬಿಟ್ಟ” ಎಂದು ತಿವಾರಿ ಹೇಳುತ್ತಿರುವ ವಿಡಿಯೋ ಬಲೇ ತಮಾಷೆಯಾಗಿ ಕಾಣಿಸುತ್ತಿದೆ.