ಭಾರತೀಯ ಚಿತ್ರರಂಗಕ್ಕೆ 2020 ಅಷ್ಟೇನೂ ಪ್ರಶಸ್ತವಿದ್ದಂತಿಲ್ಲ. ಕೆಲವೇ ತಿಂಗಳಲ್ಲಿ ಅನೇಕ ಕಲಾವಿದರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ.
ರಿಷಿ ಕಪೂರ್, ಇರ್ಫಾನ್ ಖಾನ್ ಮರಣದ ಸುದ್ದಿ ಅರಗಿಸಿಕೊಳ್ಳುವಷ್ಟರಲ್ಲೇ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾದ ಸುದ್ದಿ ಬಂದೆರಗಿದೆ.
ವಿಲಕ್ಷಣ ಸಾಮ್ಯತೆ ಎಂದರೆ, ಚಿಚ್ಚೋರೆ ಸಿನಿಮಾದಲ್ಲಿ ನಟ ಸುಶಾಂತ್ ಕಾರಿನ ಕಿಟಕಿಯಿಂದ ಹೊರಜಗತ್ತನ್ನ ನೋಡುವ ದೃಶ್ಯವೊಂದಿದೆ. ಅದೇ ರೀತಿ ಅಂಗ್ರೇಜಿ ಮೀಡಿಯಂ ಚಿತ್ರದಲ್ಲಿ ಇರ್ಫಾನ್ ಖಾನ್ ಕೂಡ ಅಂಥದ್ದೇ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದರು.
ಎರಡೂ ಚಿತ್ರಗಳು ವೈರಲ್ ಆಗಿದ್ದು, ಎಲ್ಲರೂ ಸ್ವರ್ಗಕ್ಕೆ ಕ್ಯಾಬ್ ಮಾಡಿಕೊಂಡು ಹೋದರೇನೋ ಎಂಬಂತೆ ಚಿತ್ರಕ್ಕೆ ಶೀರ್ಷಿಕೆ ಕೊಡಲಾಗಿದೆ. ಚಿತ್ರ ನೋಡಿದ ಅಭಿಮಾನಿಗಳ ಕಣ್ಣಂಚಲ್ಲಿ ನೀರೂರಿದೆ.
https://twitter.com/Bayantaara/status/1272207196332441606?ref_src=twsrc%5Etfw%7Ctwcamp%5Etweetembed%7Ctwterm%5E1272207196332441606&ref_url=https%3A%2F%2Fwww.timesnownews.com%2Fthe-buzz%2Farticle%2Feerie-co-incidence-shots-from-sushant-singh-rajput-irrfan-khan-and-heath-ledgers-last-films-go-viral%2F606730