ಕೊರೊನಾ ವೈರಸ್ನಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಅನಿವಾರ್ಯವಾಗಿದೆ. ಈಗಾಗಲೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ತರಗತಿಗಳನ್ನ ಆರಂಭಿಸಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಡ್ಡಾಯಗೊಳಿಸಿವೆ.
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲೂ ಸಂಗೀತ ತರಗತಿ ಆರಂಭಿಸಲಾಗಿದ್ದು, ಪ್ರತಿಯೊಂದು ವಿದ್ಯಾರ್ಥಿಗಳನ್ನ ಸಾಮಾಜಿಕ ಅಂತರದಲ್ಲಿ ಕೂರಿಸೋದ್ರ ಜೊತೆಗೆ ಪ್ರತಿಯೊಬ್ಬರನ್ನ ಪ್ರತ್ಯೇಕ ಟೆಂಟ್ನ ಒಳಗಡೆ ಕೂರಿಸಲಾಗಿದೆ. ರೆಡಿಟ್ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದ್ದು ಸಖತ್ ವೈರಲ್ ಆಗಿದೆ.
ವಿದ್ಯಾರ್ಥಿಗಳೆಲ್ಲರೂ ಹಸಿರು ಬಣ್ಣದ ಮಿನಿ ಟೆಂಟ್ನ ಒಳಗಡೆ ಕೂತು ತಮ್ಮ ಸಂಗೀತ ಸಾಧನವನ್ನ ನುಡಿಸುತ್ತಿದ್ದಾರೆ. ಇದನ್ನ ನೋಡಿದ ನೆಟ್ಟಿಗನೊಬ್ಬ ಇಷ್ಟು ಪುಟ್ಟ ಟೆಂಟ್ನ ಒಳಗಡೆ ದೊಡ್ಡ ದೊಡ್ಡ ಸಂಗೀತ ಸಾಧನವನ್ನ ಹೇಗೆ ಇಡಲಾಗಿದೆ ಎಂದು ಆಶ್ಚರ್ಯ ಹೊರಹಾಕಿದ್ದಾರೆ. ಇನ್ನೊಬ್ಬ ನೆಟ್ಟಿಗರು, ನಾನು ನಮಗಾಗಿ ಅಲ್ಲದೇ ಹೋದರು ನಿಮ್ಮ ಸ್ಥಿತಿಯನ್ನ ನೋಡಿದ ಬಳಿಕ ಲಸಿಕೆ ಸ್ವೀಕರಿಸಲಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.