370ನೇ ವಿಧಿ ರದ್ದತಿ ಬಳಿಕವೂ ಜಮ್ಮು ಕಾಶ್ಮೀರದ ಕೆಲವೆಡೆ ರಾಷ್ಟ್ರಧ್ವಜ ಹಾರಿಸಲು ಏಕೆ ಅನುಮತಿ ಸಿಗುತ್ತಿಲ್ಲ ಅಂತಾ ಶಿವಸೇನೆ ಪ್ರಶ್ನೆ ಮಾಡಿದೆ.
ಶಿವಸೇನಾದ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನ ಕೇಳಲಾಗಿದೆ. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಎಂದು ಹೇಳಿಕೊಂಡಿರುವ ಮೂವರನ್ನ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ್ದಾರೆ ಎಂಬ ಕಾರಣಕ್ಕೆ ಶ್ರೀನಗರದ ಲಾಲ್ಚೌಕ್ನಲ್ಲಿ ಬಂಧಿಸಲಾಗಿದೆ. ಹೀಗಾದ್ರೆ 370ನೇ ವಿಧಿ ಬಳಿಕ ಕಣಿವೆ ರಾಜ್ಯದಲ್ಲಿ ಯಾವ ಬದಲಾವಣೆ ಬಂದತಾಯ್ತು..? ಇದರರ್ಥ ಕಾಶ್ಮೀರದ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ ಅಂತಾ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ಕಿವಿ ಹಿಂಡಿದೆ.
ಶಿವಸೇನೆಗೆ ಹಿಂದುತ್ವ ಅಂದರೆ ರಾಷ್ಟ್ರೀಯತೆ. ಆದರೆ ಕೇಂದ್ರ ಸರ್ಕಾರ ಮಾತ್ರ ಮುಂಬೈಯನ್ನ ಪಾಕಿಸ್ತಾನಕ್ಕೆ ಹೋಲಿಸಿದ ನಕಲಿ ವೀರ ವನಿತೆಗೆ ಭದ್ರತೆ ನೀಡುತ್ತೆ. ರಾಷ್ಟ್ರಧ್ವಜ ಹಾರಿಸಲು ಹೋದ ಯುವಕರನ್ನ ಬಂಧಿಸುತ್ತೆ ಅಂತಾ ಕಂಗನಾ ಹೆಸರನ್ನ ಹೇಳದೇ ವ್ಯಂಗ್ಯ ಮಾಡಿದೆ.