ಬೆಂಗಳೂರು: FSL ಪರೀಕ್ಷೆಯಲ್ಲಿ ನಟಿಯರಾದ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಸೇವಿಸಿದ್ದರು ಎನ್ನುವುದು ಗೊತ್ತಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಗಿಣಿ ಮತ್ತು ಸಂಜನಾ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇವರಿಂದ ಮಾದರಿ ಸಂಗ್ರಹಿಸಿ ಎಫ್.ಎಸ್.ಎಲ್. ಪರೀಕ್ಷೆಗೆ ಕಳಿಸಲಾಗಿದ್ದು, ನಿನ್ನೆ ಪರೀಕ್ಷಾ ವರದಿ ಬಂದಿದ್ದು, ಇವರಿಬ್ಬರಿಗೂ ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವಿತ್ತು ಎನ್ನಲಾಗಿದೆ.
ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದು, ನಟಿಯರ ಕೂದಲು ಸೇರಿದ ವಿವಿಧ ಮಾದರಿ ಸಂಗ್ರಹಿಸಿ ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗಿತ್ತು. ಸ್ಯಾಂಪಲ್ ಪರೀಕ್ಷೆಯಲ್ಲಿ ಇವರು ಡ್ರಗ್ ಸೇವಿಸಿರುವುದು ದೃಢಪಟ್ಟಿದೆ.
10 ತಿಂಗಳ ನಂತರ ಹೈದರಾಬಾದ್ ಎಫ್ಎಸ್ಎಲ್ ಕೇಂದ್ರದಿಂದ ರಿಪೋರ್ಟ್ ಬಂದಿದ್ದು, ಆರೋಪ ಸಾಬೀತಾಗಿರುವುದರಿಂದ ನಟಿಯರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಎಫ್ಎಸ್ಎಲ್ ವರದಿ ಕೈ ಸೇರಿರುವುದರಿಂದ ಸಿಸಿಬಿ ತನಿಖೆ ಮತ್ತಷ್ಟು ತೀವ್ರಗೊಳ್ಳಲಿದೆ ಎನ್ನಲಾಗಿದೆ.