ದಿನವಿಡೀ ಸ್ವಯಂ ರಕ್ಷಣಾ ಸೂಟ್ (PPE) ಧರಿಸಿಕೊಂಡು, ಅದರ ಕಿರಿಕಿರಿಯನ್ನು ಸಹಿಸಿಕೊಂಡೇ ಆಸ್ಪತ್ರೆಗೆ ಬರುವ ಕೋವಿಡ್-19 ಪೇಶೆಂಟ್ಗಳನ್ನು ನೋಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈ ಸಾಂಕ್ರಮಿಕದ ದಿನಗಳು ಮಾನಸಿಕ ಹಾಗೂ ದೈಹಿಕವಾಗಿ ಬಹಳ ಸವಾಲಿನದ್ದಾಗಿವೆ.
ಇಂಥ ಸಮಯದಲ್ಲಿ, ಮನಸ್ಸನ್ನು ಹಗುರ ಮಾಡಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ಒಂದಷ್ಟು ಮನರಂಜನೆಯ ಕೆಲಸಗಳನ್ನು ಮಾಡುವುದು ಸಹಜ. ಇದೀಗ ಡಾ. ರಿಚಾ ನೇಗಿ ಬಾಲಿವುಡ್ನ ಸ್ಟ್ರೀಟ್ ಡಾನ್ಸರ್ 3ಡಿ ಚಿತ್ರ ಗರ್ಮಿ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಾ ತಮ್ಮದೇ ವಿಡಿಯೋ ಮಾಡಿಕೊಂಡು ಅದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಸೋಂಕಿನ ವಿರುದ್ಧ ಹೋರಾಡುವಾಗಲೂ ಸಹ ನಮ್ಮ ಮನಸ್ಸುಗಳಿಗೆ ನಕಾರಾತ್ಮಕತೆ ಸುಳಿಯಲು ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿಕೊಂಡಿರುವ ನೇಗಿ, ತಮ್ಮ ಸಹವರ್ತಿಗಳಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.
https://www.instagram.com/p/CCFuCv2neOW/?utm_source=ig_embed