
ಬೆಂಗಳೂರು: ಸಿನಿಮಾ ನಿರ್ಮಾಣದ ನೆಪದಲ್ಲಿ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರಿಗೆ 1.6 ಕೋಟಿ ರೂಪಾಯಿ ವಂಚನೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರನ್ನು ಭೇಟಿಯಾದ ನಾರಾಯಣ್ ದಾಖಲೆ ಸಲ್ಲಿಸಿದ್ದಾರೆ.
ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ತೆರಳಿದ ನಾರಾಯಣ್ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರಿಗೆ ದಾಖಲೆ ನೀಡಿದ್ದಾರೆ. ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ನಿರ್ಮಾಣ ಮಾಡುವುದಾಗಿ ಐದು ಮಂದಿ ಬಂದಿದ್ದು ಅವರ ಮಾತು ನಂಬಿ ಸಿನಿಮಾ ಶುರು ಮಾಡಿದ್ದೆ. ಚಿತ್ರೀಕರಣದ ಹಂತದಲ್ಲಿ ಹಣ ಕೊಡದೇ ನೆಪ ಹೇಳುತ್ತಿದ್ದ ಅವರು ನಿವೇಶನವೊಂದನ್ನು ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಹೇಳಿದ್ದಾರೆ.