ಬಾಲಿವುಡ್ ನಟಿ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾಳೆ. ಡ್ರಗ್ಸ್ ಪ್ರಕರಣದಲ್ಲಿ ಆಕೆ ಜೈಲು ಸೇರಿದ್ದಾಳೆ. ಈ ಮಧ್ಯೆ ಕೆಲವರು ರಿಯಾ ಪರ ವಾದ ಮಂಡಿಸಿದ್ರೆ ಮತ್ತೆ ಕೆಲವರು ರಿಯಾ ವಿರೋಧವಾಗಿ ಮಾತನಾಡ್ತಿದ್ದಾರೆ. ನಿರ್ದೇಶಕ ನಿಖಿಲ್ ದ್ವಿವೇದಿ ಟ್ವಿಟರ್ ರಲ್ಲಿ ರಿಯಾ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಯಾ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ನಿಮ್ಮ ಬಗ್ಗೆ ಏನು ಹೇಳಲಾಗ್ತಿದೆಯೋ ಅದು ನೀವಲ್ಲ ಎಂಬುದು ಸ್ಪಷ್ಟ. ನನ್ನ ಪ್ರಕಾರ ನಿಮಗೆ ಅನ್ಯಾಯವಾಗಿದೆ. ಕಾನೂನು ಬಾಹಿರವಾಗಿ ನಡೆದುಕೊಳ್ತಿದ್ದಾರೆ. ನಾನು ನಿಮ್ಮೊಂದಿಗೆ ಕೆಲಸ ಮಾಡಲು ಬಯಸುತ್ತೇನೆಂದು ನಿಖಿಲ್ ಟ್ವೀಟ್ ಮಾಡಿದ್ದಾರೆ.
ನಿಖಿಲ್ ಟ್ವೀಟನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನಿಖಿಲ್, ರಿಯಾ ಇನ್ನೂ ಅಪರಾಧಿಯೆಂದು ಘೋಷಣೆಯಾಗಿಲ್ಲ. ಒಂದು ವೇಳೆ ಅಪರಾಧಿಯಾಗಿದ್ದರೆ ಆಕೆ ತಪ್ಪು ತಿದ್ದಿಕೊಳ್ಳುವವರೆಗೆ ಕಾಯುತ್ತೇನೆ. ನಂತ್ರ ಆಕೆ ಜೊತೆ ಕೆಲಸ ಮಾಡ್ತೇನೆ. ಆಕೆ ತಪ್ಪು ತಿದ್ದಿಕೊಳ್ಳದೆ ಹೋದಲ್ಲಿ ನನ್ನ ಮಾತನ್ನು ವಾಪಸ್ ಪಡೆಯುತ್ತೇನೆಂದು ನಿಖಿಲ್ ಹೇಳಿದ್ದಾರೆ.