ಗೋವಾ ರಾಜಧಾನಿ ಪಣಜಿ ಸಮೀಪದ ನೆರುಲ್ ಗ್ರಾಮದಲ್ಲಿ ಚಿತ್ರೀಕರಣ ನಡೆಸಿದ್ದ ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ಹೌಸ್, ಗ್ರಾಮದಲ್ಲಿ ಪಿಪಿಇ ಕಿಟ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನ ವಿವೇಚನೆಯಿಲ್ಲದೇ ಎಸೆದ ವಿವಾದ ಮುಗಿಯುವಂತೆ ಕಾಣುತ್ತಿಲ್ಲ.
ಇದೀಗ ಈ ವಿವಾದ ಸಂಬಂಧ ಮಧ್ಯ ಪ್ರವೇಶಿಸಿರುವ ಗೋವಾ ತ್ಯಾಜ್ಯ ನಿರ್ವಹಣಾ ಸಚಿವ ಮೈಕಲ್ ಲೋಬೋ ಕರಣ್ ಜೋಹರ್ ಗ್ರಾಮಸ್ಥರ ಬಳಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಅಂತಾ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಮೊದಲನೆಯದಾಗಿ ಧರ್ಮ ಪ್ರೊಡಕ್ಷನ್ ಮಾಲೀಕ ಇಂತಹ ಕೆಲಸ ಮಾಡಿದ್ದಕ್ಕೆ ಗೋವಾ ಜನರ ಬಳಿ ಕ್ಷಮೆ ಯಾಚಿಸಬೇಕು. ತಾವು ಮಾಡಿದ್ದ ತಪ್ಪನ್ನ ಸ್ವೀಕರಿಸಿ ಫೇಸ್ಬುಕ್ನಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಗೋವಾ ತ್ಯಾಜ್ಯ ನಿರ್ವಹಣಾ ಘಟಕದ ವತಿಯಿಂದ ದಂಡ ವಿಧಿಸಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ,
ಇನ್ನು ಇದೇ ವಿಚಾರಕ್ಕೆ ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ್ದ ಕಂಗನಾ ರಣಾವತ್ ಬಗ್ಗೆಯೂ ಮಾತನಾಡಿದ ಅವ್ರು, ಗೋವಾ ನೆಲದ ಬಗ್ಗೆ ಕಂಗನಾಗೆ ಏನೂ ಗೊತ್ತಿಲ್ಲ. ಅವರು ಸುಮ್ಮನೇ ನಮ್ಮ ನೆಲದ ಹೆಸರನ್ನ ಹಾಳು ಮಾಡ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.