ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ಖ್ಯಾತ ನಟ ಧನುಷ್ ಅವರ 18 ವರ್ಷದ ದಾಂಪತ್ಯ ಅಂತ್ಯವಾಗಿದೆ. ಈ ಮೂಲಕ ಮತ್ತೊಂದು ಹೈಪ್ರೊಫೈಲ್ ಜೋಡಿ ವೈವಾಹಿಕ ಜೀವನ ಅಂತ್ಯಗೊಂಡಿದೆ.
ಇತ್ತೀಚೆಗಷ್ಟೇ ಖ್ಯಾತ ನಟ ನಾಗಾರ್ಜುನ ಪುತ್ರ, ನಟ ನಾಗಚೈತನ್ಯ – ಖ್ಯಾತ ನಟಿ ಸಮಂತಾ ಜೋಡಿ ದೂರವಾಗಿದ್ದು, ಈಗ ರಜನಿಕಾಂತ್ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ ದೂರವಾಗಿದ್ದಾರೆ.
18 ವರ್ಷಗಳಿಂದ ಸ್ನೇಹಿತರಾಗಿ, ಒಬ್ಬರಿಗೊಬ್ಬರು ಹಿತಬಯಸುವವರಾಗಿ ಒಟ್ಟಿಗೆ ಇದ್ದ ನಮ್ಮ ದಾರಿ ಈಗ ಪ್ರತ್ಯೇಕವಾಗಿದೆ. ಐಶ್ವರ್ಯಾ ಮತ್ತು ನಾನು ಪ್ರತ್ಯೇಕವಾಗಿ ಇರಲು ತೀರ್ಮಾನಿಸಿದ್ದೇವೆ. ನಮ್ಮ ತೀರ್ಮಾನ ಗೌರವಿಸಿ ಎಂದು ಧನುಷ್ ಹೇಳಿದ್ದಾರೆ. 2004ರಲ್ಲಿ ಮದುವೆಯಾಗಿದ್ದ ಐಶ್ವರ್ಯ ಮತ್ತು ಧನುಷ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.