ಸ್ಯಾಂಡಲ್ ವುಡ್ ನಲ್ಲಿ ಭಾರಿ ಯಶಸ್ಸು ಕಂಡ ‘ಟಗರು’ ಚಿತ್ರದಲ್ಲಿದ್ದ ಶಿವಣ್ಣ ಮತ್ತು ಧನಂಜಯ್ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ತಮಿಳಿನ ‘ಗೋಲಿಸೋಡಾ’ ಸಿನಿಮಾ ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯಿಸಲಿದ್ದಾರೆ. ‘ಟಗರು’ ಚಿತ್ರದಲ್ಲಿ ಶಿವಣ್ಣ ಮತ್ತು ಧನಂಜಯ್ ಅವರನ್ನು ಇಷ್ಟಪಟ್ಟಿದ್ದ ಪ್ರೇಕ್ಷಕರು ಇಬ್ಬರನ್ನು ಮತ್ತೆ ಒಟ್ಟಿಗೆ ತೆರೆ ಮೇಲೆ ಕಣ್ತುಂಬಿಕೊಳ್ಳಬಹುದಾಗಿದೆ.
ಅಂಜಲಿ ಚಿತ್ರದ ನಾಯಕಿಯಾಗಿದ್ದು, ಶಶಿಕುಮಾರ್, ಪೃಥ್ವಿ ಅಂಬಾರ್ ಮೊದಲಾದವರು ಅಭಿನಯಿಸಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ನವೆಂಬರ್ 23 ರಿಂದ ಚಿತ್ರೀಕರಣ ಶುರುವಾಗಲಿದೆ.