ಹಿಂದಿ ಧಾರವಾಹಿ ಲೋಕದ ತಾರೆ ದೆಬೋಲೀನಾ ಭಟ್ಟಾಚರ್ಜಿ ಬಿಗ್ ಬಾಸ್ ಸ್ಪರ್ಧಿಯಾಗಿ ಹಾಗೂ ಸಾಥ್ ನಿಬಾನಾ ಸಾಥಿಯಾ ಧಾರವಾಹಿಗಳ ಮೂಲಕ ಸದ್ದು ಮಾಡಿದಂತಹ ನಟಿ. ಸಿನಿಮಾದಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸಾಮಾಜಿಕ ಜಾಲತಾಣಗಳಿಂದಲೇ ಫೇಮಸ್ ಆಗಿರುವ ತಾರೆ.
ಇದೀಗ ಈ ನಟಿ ನಿನ್ನೆ ಕೊರೊನಾದಿಂದ ಮೃತರಾದ ದಿವ್ಯಾ ಭಟ್ನಾಗರ್ರನ್ನ ನೆನೆದು ಭಾವನಾತ್ಮಕ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ದಿವ್ಯಾರನ್ನ ನೆನೆದು ಕಣ್ಣೀರಾಕಿದ ದೆಬೊಲೀನಾ ಆಕೆಯ ಪತಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆಕೆ ಸ್ವತಂತ್ರವಾಗಿ ಬದುಕಬೇಕೆಂದು ನಿರ್ಧಾರ ಮಾಡಿದ್ದಳು. ಬಹುಶಃ ಆ ದೇವರಿಗೆ ಅವಳು ಜೀವನದಲ್ಲಿ ಪಡುತ್ತಿದ್ದ ಕಷ್ಟವನ್ನ ನೋಡಲಿಕ್ಕೆ ಆಗಲಿಲ್ಲ ಎನಿಸುತ್ತೆ. ಆಕೆಯ ಪತಿ ಗಗನ್ ಗಬ್ರು ಆಕೆಗೆ ಕೊಡಬಾರದ ಕಷ್ಟ ನೀಡಿದ್ದ. ದಿವ್ಯಾ ತಾಯಿ ಹಾಗೂ ಸಹೋದರ ಪಬ್ಲಿಸಿಟಿ ಪಡಯೋಕೆ ಎಂದು ನನ್ನ ಹೆಸರು ಬಳಿಸಿಕೊಂಡಿದ್ದಾರೆ ಎಂದು ನೀನು ಆರೋಪ ಮಾಡಿದ್ದೆ ಅಲ್ವಾ..? ನೀನೇನು ದೊಡ್ಡ ಮನುಷ್ಯನಲ್ಲ. ಆದರೆ ಈಗ ನಾನು ನಿನಗೆ ಪಬ್ಲಿಸಿಟಿ ನೀಡುತ್ತಿದ್ದೇನೆ ಅಂತಾ ಗುಡುಗಿದ್ದಾರೆ.
https://www.instagram.com/tv/CIf2DjXBeFf/?utm_source=ig_web_copy_link