ಕೊರೊನಾ ಮಧ್ಯೆಯೇ ಟಿವಿ-ಸಿನಿಮಾ ಶೂಟಿಂಗ್ ಶುರುವಾಗಿದೆ. ಸಿಬ್ಬಂದಿ, ಕಲಾವಿದರ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಭಾನುವಾರ ಟ್ವೀಟ್ ಮಾಡಿ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ಮಾರ್ಗಸೂಚಿ ಪ್ರಕಾರ, ಟಿವಿ ಕಾರ್ಯಕ್ರಮ, ಸಿನಿಮಾ ಶೂಟಿಂಗ್ ವೇಳೆ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಕ್ಯಾಮೆರಾದ ಮುಂದೆ ನಟರನ್ನು ಹೊರತುಪಡಿಸಿ ಎಲ್ಲರಿಗೂ ಫೇಸ್ ಮಾಸ್ಕ್ ಕಡ್ಡಾಯವಾಗಿದೆ. 6 ಅಡಿ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕಿದೆ. ಮೇಕಪ್ ಕಲಾವಿದರು, ಹೇರ್ ಸ್ಟೈಲಿಸ್ಟ್ ಗಳು ಪಿಪಿಇ ಬಳಸಬೇಕು. ವಿಗ್, ವೇಷಭೂಷಣ ಮತ್ತು ಮೇಕ್ಅಪ್ ಹಂಚಿಕೆಯನ್ನು ಕಡಿಮೆ ಮಾಡಬೇಕು. ಹಂಚಿಕೆ ವಸ್ತುಗಳನ್ನು ಬಳಸುವಾಗ ಗ್ಲೌಸ್ ಬಳಸುವುದು ಕಡ್ಡಾಯ. ರಂಗಪರಿಕರಗಳನ್ನು ಮಿತವಾಗಿ ಬಳಸಬೇಕು. ನಂತರ ಸ್ವಚ್ಛಗೊಳಿಸಬೇಕು. ಪ್ರೇಕ್ಷಕರಿಗೆ ಸೆಟ್ ಗೆ ಬರಲು ಅವಕಾಶ ನೀಡಬಾರದು ಸೇರಿದಂತೆ ಅನೇಕ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.
ನೈರ್ಮಲ್ಯ, ಜನದಟ್ಟಣೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.