ಥೇಟ್ ನಿಮ್ಮಂತೆಯೇ ಇರುವ ವ್ಯಕ್ತಿಯನ್ನು ಭೇಟಿ ಮಾಡಿರುವ ಅನುಭವ ಯಾವತ್ತಾದ್ರು ನಿಮಗೆ ಆಗಿದೆಯೇ? ಇಲ್ಲಿಬ್ಬರು ಮಹಿಳೆಯರು ಏಳು ವರ್ಷದ ಅಂತರವಿದ್ದರೂ ಸಹ ನೋಡಲು ಥೇಟ್ ಒಬ್ಬರಂತೆ ಮತ್ತೊಬ್ಬರು ಇದ್ದಾರೆ.
ಬಿಯಾಂಕಾ ಮಿಹಾಯಿ ಎಂಬ 18 ವರ್ಷದ ರೊಮಾನಿಯಾದ ಹಾಡುಗಾತಿ ಹಾಗೂ 25 ವರ್ಷ ವಯಸ್ಸಿನ ಪ್ಯಾಲಿಸ್ಟೀನ್-ಸಿರಿಯನ್ ಮಾಡೆಲ್ ಲನಾ ಅಲ್ ಬೇಯ್ಕ್ ಜೊತೆಯಲ್ಲಿ ನಿಂತು ತೆಗೆಸಿಕೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿವ ವೈರಲ್ ಆಗಿದೆ.
ಈ ಇಬ್ಬರೂ ಅದು ಯಾವ ಮಟ್ಟಿಗೆ ಒಂದೇ ಥರ ಇದ್ದಾರೆ ಎಂದರೆ, ಖುದ್ದು ಅವರವರ ಕುಟುಂಬದ ಸದಸ್ಯರಿಗೇ ಗುರುತು ಹಿಡಿಯಲು ಕಷ್ಟ ಆಗುವ ಮಟ್ಟಿಗೆ ಸಾಮ್ಯತೆ ಇದೆ ಇಬ್ಬರಲ್ಲೂ.