ನವದೆಹಲಿ: ದೆಹಲಿಯ ವಿಕಾಸಪುರಿ ಪ್ರದೇಶದ ಬಡ ಆಟೊ ರಿಕ್ಷಾ ಚಾಲಕನ ಮಗ ಕಮಲ್ ಸಿಂಗ್. ಹೆಸರಿಗೆ ತಕ್ಕಂತೆ ಜನರನ್ನು ಕಮಾಲ್ ಮಾಡುವ ಡಾನ್ಸರ್. ಈಗ ವಿಶ್ವದ ಗಮನ ಸೆಳೆದಿದ್ದಾರೆ. ಲಂಡನ್ ನಲ್ಲಿರುವ ಇಂಗ್ಲಿಷ್ ನ್ಯಾಷನಲ್ ಬ್ಯಾಲಟ್ ಶಾಲೆಗೆ ಆಯ್ಕೆಯಾಗಿದ್ದಾರೆ. ಆ ಶಾಲೆಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು.
ಪ್ರಸಿದ್ಧ ಹಿಂದಿಚಿತ್ರ ಎನಿಬಡಿ ಕ್ಯಾನ್ ಡಾನ್ಸ್ (ಎಬಿಸಿಡಿ) ನೋಡಿ ಕಮಲ್ ಪ್ರೇರಿತರಾಗಿದ್ದರು. ನಂತರ ಅವರು, ದೆಹಲಿಯಲ್ಲಿ ಮೇರಿಯೋ ಫರ್ನಾಂಡೋ ಅಗ್ಯುಲಿಲಾ ಅವರು ನಡೆಸುವ ಫರ್ನಾಂಡೊ ಬ್ಯಾಲೆ ಕಂಪನಿಗೆ ಸೇರಿಕೊಂಡರು. ಪೊರ್ನಾಂಡೊ ಅವರು ಕಮಲ್ ಸಿಂಗ್ ಎಲ್ಲರಂತಲ್ಲ ಎಂದು ಗುರುತಿಸಿದರು. ಏಕೆಂದರೆ ಸಿಂಗ್ ತಮ್ಮ ಬೆನ್ನನ್ನು ಎಷ್ಟು ಬೇಕಾದರೂ ಬಾಗಿಸಬಲ್ಲವರಾಗಿದ್ದರು. ಇದರಿಂದ ಅವರಿಗೆ ವಿಶೇಷ ತರಬೇತಿ ನೀಡಿದರು. ತಪ್ಪುಗಳನ್ನು ತಿದ್ದಿದರು. ರಷ್ಯಾದ ವೆಗನೊವಾ ಅಕಾಡೆಮಿ ಆಫ್ ಬೆಲಟ್ ನಲ್ಲಿ ಕಳೆದ ವರ್ಷ ನಡೆದ ಬೇಸಿಗೆ ಕಾರ್ಯಕ್ರಮದಲ್ಲಿ ಕಮಲ್ ಸಿಂಗ್ ಮೊದಲ ಅಂತಾರಾಷ್ಟ್ರೀಯ ಬ್ಯಾಲೆ ಪ್ರದರ್ಶನ ನೀಡಿದರು.
ಲಂಡನ್ ಬ್ಯಾಲೆ ಶಾಲೆಗೆ ಕಮಲ್ ಆಯ್ಕೆಯಾದರು. ಆದರೆ, ಅಲ್ಲಿಗೆ ತೆರಳಲು ಅವರ ಬಳಿ ಹಣ ಇಲ್ಲ. ಇದರಿಂದ ಫರ್ನಾಂಡೋ ಅವರು ಕಮಲ್ ಅವರ ಕಲಿಕೆಗೆ ತಾವೇ ಸ್ಕಾಲರ್‌ಶಿಪ್ ನೀಡುತ್ತಿದ್ದಾರೆ. ಆದರೂ ಇತರ ಖರ್ಚುಗಳಿಗೆ 10 ಲಕ್ಷ ರೂ. ಬೇಕಿದ್ದು, ಅದಕ್ಕಾಗಿ ಹಣ ಸಂಗ್ರಹ ಪ್ರಾರಂಭವಾಗಿದೆ.
https://www.instagram.com/tv/CDwjJF1AOzD/?utm_source=ig_web_copy_link