ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಹಾಸ್ಯ ನಟಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಅಂಚಲ್ ಅಗರವಾಲ್ ಅವರಿಗೆ ಹಸ್ತಮೈಥುನ ವಿಡಿಯೋ ಕಳುಹಿಸಿದ್ದಾನೆ.
ಇದರಿಂದ ಆಕ್ರೋಶಗೊಂಡ ನಟಿ ಆರೋಪಿತನನ್ನು ಬಹಿರಂಗಪಡಿಸಿದ್ದು, ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ. ಆರೋಪಿ ಮಾಸ್ಕ್ ನಿಂದ ಮುಖಮುಚ್ಚಿಕೊಂಡು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾನೆ. ಬಳಿಕ ಈ ವಿಡಿಯೋವನ್ನು ಸೈಬರ್ ಸೆಲ್ ಗೆ ರವಾನಿಸಲಾಗಿದೆ. ಪೊಲೀಸರು ಆರೋಪಿಯನ್ನು ಸಂಪರ್ಕಿಸಿದಾಗ ಕ್ಷಮೆಯಾಚಿಸಿದ್ದಾನೆ ಎಂದು ಸಂತ್ರಸ್ಥೆ ತಿಳಿಸಿದ್ದಾರೆ.