ಮುಂಬೈ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಆಕೆಗೆ ಹಲವಾರು ಪರೀಕ್ಷೆಗಳನ್ನು ಮಾಡಲಾಗಿದೆ. ಚಿಕಿತ್ಸೆ ಬಳಿಕ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ.
ಜೂನ್‌ನಲ್ಲಿ ‘ಪ್ರಾಜೆಕ್ಟ್ ಕೆ’ ಎಂಬ ತಾತ್ಕಾಲಿಕ ಶೀರ್ಷಿಕೆಯ ಚಲನಚಿತ್ರದ ಸೆಟ್ ನಲ್ಲಿ ಅಸ್ವಸ್ಥತೆಯ ಕಾರಣ ದೀಪಿಕಾ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಟ್ ನಲ್ಲಿ ಹೃದಯ ಬಡಿತ ಹೆಚ್ಚಾಗಿ ಅವರನ್ನು ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶೀಘ್ರದಲ್ಲೇ ದೀಪಿಕಾ ಚೇತರಿಸಿಕೊಂಡು ಸೆಟ್ ಗೆ ಮರಳಿದ್ದರು.
‘ಓಂ ಶಾಂತಿ ಓಂ’, ‘ಹ್ಯಾಪಿ ನ್ಯೂ ಇಯರ್’ ಮತ್ತು ‘ಚೆನ್ನೈ ಎಕ್ಸ್ ಪ್ರೆಸ್’ ನಂತರ ದೀಪಿಕಾ ಮತ್ತು ಶಾರುಖ್ ಖಾನ್ ‘ಪಠಾನ್’ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಜಾನ್ ಜಾನ್ ಅಬ್ರಹಾಂ ಕೂಡ ಅಭಿನಯಿಸಿದ್ದಾರೆ.