ಬೆಂಗಳೂರು: ಘಟನೆಯ ನಂತರ ದರ್ಶನ್ ವಿಚಲಿತರಾಗಿದ್ದಾರೆ. ದರ್ಶನ್ ವಿಚಲಿತರಾಗದೆ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಅವರ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಹೋಟೆಲ್ ನಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೋ? ಇಲ್ಲವೋ? ಅರುಣಕುಮಾರಿಯನ್ನು ತೋಟಕ್ಕೆ ಕರೆಸಿಕೊಂಡಿದ್ದು ಏಕೆ? ಹೋಟೆಲ್ ನಲ್ಲಿ ನೀವು ಏನು ಪ್ರೂವ್ ಮಾಡಲು ಹೋಗಿದ್ರೀ? ಗಂಡಸುತನ ಪ್ರೂವ್ ಮಾಡಲು ಹೋಟೆಲ್ ಸಿಬ್ಬಂದಿಗೆ ಹೊಡೆದ್ರಾ? ಗಂಡಸ್ತನ ಪ್ರದರ್ಶಿಸಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರಾ? ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದು ನಟ ದರ್ಶನ್ ಗೆ ಇಂದ್ರಜಿತ್ ಲಂಕೇಶ್ ತಿರುಗೇಟು ನೀಡಿದ್ದಾರೆ.
ನಿಮ್ಮ ಡೈಲಾಗ್ ಗಳನ್ನು ಸಿನಿಮಾದಲ್ಲಿ ತೋರಿಸಿ. ನನ್ನ ಬಳಿ ಇರುವ ಸಾಕ್ಷಗಳನ್ನು ಪೊಲೀಸರಿಗೆ ಕೊಡುತ್ತೇನೆ. ಸಾಕ್ಷ ಬಿಡುಗಡೆ ಮಾಡಿದರೆ ಮಾತ್ರ ಗಂಡಸುತನವಲ್ಲ. ಗೂಂಡಾಗಿರಿ ಎಂದು ಹೇಳಿದ್ದೆ, ನಾನು ಅಸಭ್ಯ ಪದ ಬಳಕೆ ಮಾಡಿಲ್ಲ. ಸೆಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಬೇಕು. ನಿಮ್ಮ ಪದಬಳಕೆ ಶಬ್ದ ನಿಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ. ಬಡವರಿಗೆ ಅನ್ಯಾಯವಾಗಿದೆ ನ್ಯಾಯ ಸಿಗಬೇಕು. ಅಸಂಬದ್ಧ ಬಳಸಿದ್ದಕ್ಕೆ ನಾನು ವಕೀಲರ ಬಳಿ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.
ಡ್ರಗ್ ವಿಷಯ ಎಲ್ಲಿಗೆ ಬಂತು ಎಂದು ದರ್ಶನ್ ಪ್ರಶ್ನಿಸಿದ್ದಾರೆ. ಡ್ರಗ್ ವಿಷಯದಲ್ಲಿ ಅವರಿಗೆ ತೊಂದರೆಯಾಗಿದೆಯಾ? ನಾನು ಡ್ರಗ್ಸ್ ಬಗ್ಗೆ ಪ್ರಸ್ತಾಪಿಸಿದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ ಜಪ್ತಿ ಮಾಡಿದ್ದಾರೆ. ಇದರಿಂದ ನಿಮಗೆ ಏನಾದರೂ ತೊಂದರೆ ಆಗಿದೆಯಾ ಎಂದು ಇಂದ್ರಜಿತ್ ಪ್ರಶ್ನಿಸಿದ್ದಾರೆ.