
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಭರ್ಜರಿ ಯಶಸ್ಸು ಕಂಡಿದೆ. ದರ್ಶನ್ ಅವರ ಯಾವ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎನ್ನುವ ಕುತೂಹಲ ಮೂಡಿದೆ.
ಅಂದ ಹಾಗೆ, ಯುಗಾದಿ ಹಬ್ಬಕ್ಕೆ ದರ್ಶನ್ ಹೊಸ ಸಿನಿಮಾ ಶುರುವಾಗಲಿದೆ. ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಮೊದಲೇ ಒಪ್ಪಿಕೊಂಡ ಶೈಲಜಾ ನಾಗ್, ‘ಮಿಲನ’ ಪ್ರಕಾಶ್ ನಿರ್ಮಾಣದ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಲಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಅಭಿನಯದ ‘ರಾಜವೀರ ಮದಕರಿನಾಯಕ’ ಚಿತ್ರೀಕರಣ ಮುಂದುವರಿಸಬೇಕಿತ್ತು. ಆದರೆ, ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ತಡವಾಗುತ್ತಿರುವ ಹಿನ್ನಲೆಯಲ್ಲಿ ರಾಕ್ ಲೈನ್ ಜೊತೆಗೆ ದರ್ಶನ್ ಬೇರೆ ಸಿನಿಮಾ ಮಾಡಲಿದ್ದು, ಯುಗಾದಿಗೆ ಅನೌನ್ಸ್ ಮಾಡಲಾಗುತ್ತದೆ ಎನ್ನಲಾಗಿದೆ. ದರ್ಶನ್ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಲಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.