
ಬೆಂಗಳೂರು: ಆರ್.ಆರ್. ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರ್.ಆರ್. ನಗರ ಉಪಚುನಾವಣೆ ಪ್ರಚಾರದ ಭರಾಟೆ ರಂಗೇರಿದ್ದು ಇವತ್ತು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಖ್ಯಾತ ನಟಿ ಹಾಗೂ ಬಿಜೆಪಿ ಸ್ಟಾರ್ ಪ್ರಚಾರಕಿ ಖುಷ್ಬೂ ರೋಡ್ ಶೋ ನಡೆಸಿದ್ದಾರೆ. ಆರ್.ಆರ್. ನಗರ ವ್ಯಾಪ್ತಿಯ ಲಗ್ಗೆರೆ, ಲಕ್ಷ್ಮೀದೇವಿ ನಗರ, ಸಿದ್ದಾರ್ಥನಗರ, ಖಾತಾ ನಗರದಲ್ಲಿ ಪ್ರಚಾರ ನಡೆಸಿ ಮುನಿರತ್ನ ಪರ ಮತಯಾಚಿಸಿದ್ದಾರೆ.
ನಾಳೆ ಡಿ ಬಾಸ್ ದರ್ಶನ್ ಅವರು ಆರ್.ಆರ್. ನಗರ ಕ್ಷೇತ್ರದಲ್ಲಿ ಮುನಿರತ್ನ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ ಪ್ರಚಾರದ ವೇಳಾಪಟ್ಟಿ ಇನ್ನೂ ಅಂತಿಮಗೊಳಿಸಿಲ್ಲ. ನಾಳೆ ದರ್ಶನ್ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ.