ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪ್ರತಿಭೆಗಳು ಜನರಿಗೆ ಸಿಗುತ್ತಿದ್ದಾರೆ. ಅದರಲ್ಲೂ ದೇಸಿ ಪ್ರತಿಭೆಗಳನ್ನು ಗುರುತಿಸುವ ವಿಚಾರದಲ್ಲಿ ಟ್ವೀಟರ್ ಉತ್ತಮ ವೇದಿಕೆಯಾಗುತ್ತಿದೆ. ಇದೀಗ ಇದೇ ರೀತಿ ಹಿರಿಯ ಪ್ರತಿಭೆಯ ಡ್ಯಾನ್ಸ್ ವೈರಲ್ ಆಗಿದೆ.
ಹೌದು, ರಾಜಸ್ತಾನ ಮೂಲದ ವೃದ್ಧ ಟಿಕ್‌ಟಾಕ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ವೃದ್ಧ ದೇಸಿ ಹಾಡಿಗೆ ಖಡಕ್ ಸ್ಟೆಪ್ ನ್ನು ಹಾಕುತ್ತಿದ್ದರೆ ಆ ವೃದ್ಧ ಹೆಜ್ಜೆಹಾಕುವುದನ್ನು ನೋಡಿ, ನೆರೆದಿದ್ದವರು ಶಹಬಾಸ್‌ಗಿರಿ ನೀಡಿದ್ದಾರೆ.
ಈ ವಿಡಿಯೊ ಟಿಕ್‌ಟಾಕ್‌ನಲ್ಲಿ ನಾಲ್ಕು ದಿನದ ಹಿಂದೆ ಅಪ್‌ಲೋಡ್ ಆಗಿದ್ದು, ಸೋಮವಾರ ರಾತ್ರಿ ಈ ವಿಡಿಯೊವನ್ನು ಟ್ವೀಟರ್‌ನಲ್ಲಿ ಹಿರಿಯ ಐಪಿಎಸ್ ಅಧಿಕಾರಿ, ಅರುಣ್ ಬೋಥ್ರಾ ಹಾಕಿಕೊಂಡಿದ್ದಾರೆ. ಕೆಲಸ ಮತ್ತು ಜೀವನವೆಂದು ಕ್ಯಾಪ್ಶನ್ ನೀಡಿದ್ದಾರೆ.
ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಟಿಕ್‌ಟಾಕ್‌ನಲ್ಲಿ ಒಂದು ಮಿಲಿಯನ್ ಮಂದಿ ವೀಕ್ಷಿಸಿದ್ದು, ಅರುಣ್ ಅವರ ಪೋಸ್ಟ್‌ಗೆ ಸುಮಾರು 600 ಕಾಮೆಂಟ್, 3500 ಸಾವಿರ ಲೈಕ್ ಹಾಗೂ 21 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ವೃದ್ಧರ ಜೀವನ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.