ಕಥಕ್ ಹಾಗೂ ಕಥಕ್ಕಲಿಯನ್ನ ವಿಶಿಷ್ಟ ರೂಪದಲ್ಲಿ ಒಂದುಗೂಡಿಸಿ ಹೊಸ ನೃತ್ಯ ಕಂಡುಹಿಡಿದ ಭಾರತೀಯ ನರ್ತಕ ಅಸ್ತಾದ್ ಡೆಬೂ ನಿಧನರಾಗಿದ್ದಾರೆ.
ಡಿಸೆಂಬರ್ 10ರ ಮುಂಜಾನೆ ಮುಂಬೈನ ಅವರ ನಿವಾಸದಲ್ಲಿ ಅಸ್ತಾದ್ ವಿಧಿವಶರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಸ್ತಾದ್ ಡೆಬೂ ಅವರಿಗೆ 73 ವರ್ಷ ವಯಸ್ಸಾಗಿತ್ತು.
ಭಾರತೀಯ ಹಾಗೂ ಪಾಶ್ಚಾತ್ಯ ಪರಂಪರೆಯನ್ನ ಒಂದುಗೂಡಿಸಿ ಇವರು ರಚಿಸಿದ ವಿನೂತನ ಶೈಲಿ ಭಾರತೀಯ ನೃತ್ಯ ಈಗಲೂ ಹೆಸರುವಾಸಿಯಾಗಿದೆ. ಗುಜರಾತ್ನ ಸವಾಸರಿ ಪಟ್ಟಣದಲ್ಲಿ ಜನಿಸಿದ ಇವ್ರು, ಗುರು ಪ್ರಹ್ಲಾದ್ ದಾಸ್ ಬಳಿ ಉತ್ತರ ಭಾರತದ ಹೆಸರುವಾಸಿ ನೃತ್ಯಶೈಲಿಯಲ್ಲೊಂದಾದ ಕಥಕ್ ಹಾಗೂ ಗುರು ಇ.ಕೆ ಪನ್ನಿಕರ್ ಬಳಿ ದಕ್ಷಿಣ ಭಾರತದ ಕಥಕ್ಕಲಿ ಅಭ್ಯಾಸ ಮಾಡಿದ್ರು. ಬಳಿಕ ಇವೆರಡನ್ನೂ ಸಂಯೋಜಿಸಿ ಹೊಸ ನೃತ್ಯ ಪ್ರಕಾರವನ್ನೇ ಕಂಡು ಹಿಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.