ಬಾಲಿವುಡ್ ನಲ್ಲಿ ಸದ್ಯ ಡ್ರಗ್ಸ್ ಸುದ್ದಿ ಚರ್ಚೆಯಲ್ಲಿದೆ. ಎನ್.ಸಿ.ಬಿ. ಚಿತ್ರರಂಗದ ಅನೇಕರಿಗೆ ನೊಟೀಸ್ ನೀಡಿದೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಇನ್ನೂ ಅನೇಕರಿಗೆ ಸಮನ್ಸ್ ನೀಡಲಾಗಿದೆ. ಈ ಮಧ್ಯೆ ಬಾಲಿವುಡ್ ನಟಿ ಮತ್ತು ಮಾಡೆಲ್ ಶೆರ್ಲಿನ್ ಚೋಪ್ರಾ ಮಹತ್ವದ ವಿಷ್ಯವನ್ನು ಹೊರ ಹಾಕಿದ್ದಾರೆ.
ಐಪಿಎಲ್ ನಲ್ಲಿ ಡ್ರಗ್ಸ್ ಬಳಕೆ ಮಾಡಲಾಗ್ತಿತ್ತು ಎಂದು ಶೆರ್ಲಿನ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪಂದ್ಯದ ನಂತರ ಕ್ರಿಕೆಟಿಗರ ಪತ್ನಿಯರು ಮತ್ತು ಬಾಲಿವುಡ್ ನಟಿಯರು ವಾಶ್ ರೂಂನಲ್ಲಿ ಕೊಕೇನ್ ಸೇವಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಚಾನೆಲ್ ಒಂದರಲ್ಲಿ ಮಾತನಾಡಿದ ಶೆರ್ಲಿನ್, ಎನ್.ಸಿ.ಬಿ. ವಿಚಾರಣೆಗೆ ಕರೆದರೆ ಈ ಎಲ್ಲ ವಿಷ್ಯ ಹೇಳುತ್ತೇನೆ ಎಂದಿದ್ದಾರೆ. ಐಪಿಎಲ್ ಪಂದ್ಯ ಮುಗಿದ ನಂತ್ರ ಆಟಗಾರರ ಪತ್ನಿಯರು ಹಾಗೂ ನಟಿಯರು ಕೊಕೇನ್ ಸೇವನೆ ಮಾಡ್ತಿದ್ದರು ಎಂದ ಶೆರ್ಲಿನ್, ಯಾವ ಐಪಿಎಲ್ ಋತುವಿನಲ್ಲಿ ಇದು ನಡೆದಿದೆ ಎನ್ನುವ ಬಗ್ಗೆ ಹೇಳಿಲ್ಲ.
ನಾನು ಕೆಕೆಆರ್ ಪಂದ್ಯ ವೀಕ್ಷಿಸಲು ಕೋಲ್ಕತ್ತಾಗೆ ಹೋಗಿದ್ದೆ. ಪಂದ್ಯದ ನಂತರ ಪಾರ್ಟಿ ನಡೆಯಿತು. ನಾನು ಕೂಡ ಆ ಪಾರ್ಟಿಗೆ ಹೋದೆ. ಆ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ದೊಡ್ಡ ಸೆಲೆಬ್ರಿಟಿಗಳು ಇದ್ದರು. ಡಾನ್ಸ್ ಮಾಡಿ ಸುಸ್ತಾಗಿದ್ದ ನಾನು ವಾಶ್ ರೂಮಿಗೆ ಹೋದಾಗ ಅಲ್ಲಿ ಕೋಕೆನ್ ಬಳಸುತ್ತಿರುವುದನ್ನು ನೋಡಿ ದಂಗಾದೆ ಎಂದಿದ್ದಾರೆ.