ಕೊರೋನಾ ತವರು ಚೀನಾದಲ್ಲಿ ಒಂದೊಂದೇ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ಇದೀಗ ಚಿತ್ರಮಂದಿರಗಳ ಪುನಾರಂಭಕ್ಕೆ ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ.
ಪ್ರಕರಣಗಳ ಪ್ರಮಾಣ ಕಡಿಮೆ ಇರುವಂತಹ ಪ್ರದೇಶದಲ್ಲಿ ಶೇ.75 ರಷ್ಟು ಜನರಿಗಷ್ಟೇ ಪ್ರವೇಶಾವಕಾಶ ಇರುವಂತೆ ಚಿತ್ರಮಂದಿರಗಳನ್ನು ತೆರೆಯಬಹುದು. ವಾಣಿಜ್ಯ ಚಟುವಟಿಕೆಗಳನ್ನೂ ನಡೆಸಬಹುದು.
ಪ್ರೇಕ್ಷಕರು ತಮ್ಮ ನಿಜ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕು, ಮಾಸ್ಕ್ ಧರಿಸಿರಲೇಬೇಕು, ಉಷ್ಣಾಂಶ ತಪಾಸಣೆ ಮಾಡಿಸಿಕೊಳ್ಳಲೇಬೇಕು.
ಇದೇ ರೀತಿ ಮುಂಬರುವ ಅಕ್ಟೋಬರ್ 1 ರಂದು ರಾಷ್ಟ್ರೀಯ ರಜೆ ದಿನದಿಂದ ಶೇ.75 ರಷ್ಟು ಜನರಿಗೆ ಸೀಮಿತವಾಗಿ ಪ್ರವಾಸಿ ಕ್ಷೇತ್ರಗಳಿಗೂ ಅನುಮತಿ ನೀಡುವುದಾಗಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.