alex Certify ಅಯೋಧ್ಯೆ ರಾಮಜನ್ಮ ಭೂಮಿ: ಮಧ್ಯಸ್ಥಿಕೆ ಸಮಿತಿಯಲ್ಲಿತ್ತಾ ಶಾರೂಕ್‌ ಹೆಸರು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆ ರಾಮಜನ್ಮ ಭೂಮಿ: ಮಧ್ಯಸ್ಥಿಕೆ ಸಮಿತಿಯಲ್ಲಿತ್ತಾ ಶಾರೂಕ್‌ ಹೆಸರು…?

ಸುಪ್ರೀಂ ಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೋಬ್ಡೆ ಅಯೋಧ್ಯೆ ರಾಮಜನ್ಮ ಭೂಮಿ ವಿವಾದದ ಮಧ್ಯಸ್ಥಿಕೆ ಸಮಿತಿಗೆ ಶಾರೂಕ್​ ಖಾನ್​ರ ಹೆಸರನ್ನ ಪರಿಗಣಿಸಿದ್ದರು ಎನ್ನಲಾಗಿದೆ. ಹಿರಿಯ ವಕೀಲ ಹಾಗೂ ಸುಪ್ರೀಂ ಕೋರ್ಟ್ ಬಾರ್​ ಅಸೋಸಿಯೇಷನ್​​ ಮುಖ್ಯಸ್ಥ ವಿಕಾಸ್​ ಸಿಂಗ್​ ಈ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ನ್ಯಾಯಮೂರ್ತಿ ಎಸ್​.ಎ. ಬೋಬ್ಡೆ ಅವರು ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದ ಬಗೆಹರಿಸಲು ಪಟ್ಟ ಶ್ರಮದ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ ವಿಕಾಸ್​ ಸಿಂಗ್​, ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ನಡೆಯುತ್ತಿದ್ದ ಸಮಯದಲ್ಲಿ ನನ್ನ ಹಾಗೂ ಬೋಬ್ಡೆ ನಡುವೆ ಇದ್ದ ರಹಸ್ಯವನ್ನ ನಾನಿಂದು ಬಿಚ್ಚಿಡಲೇಬೇಕು. ವಿಚಾರಣೆ ಆರಂಭಿಕ ಹಂತದಲ್ಲಿದ್ದ ವೇಳೆ ಶಾರೂಕ್​ಖಾನ್​ರನ್ನ ಈ ಸಮಿತಿಯಲ್ಲಿ ಸೇರಿಸೋಣವೇ ಎಂದು ಅವರು ನನ್ನನ್ನ ಕೇಳಿದ್ದರು. ನನಗೆ ಶಾರೂಕ್​ ಖಾನ್​ರ ಪರಿಚಯ ಇದೆ ಎಂಬುದು ಬೋಬ್ಡೆ ಅವರಿಗೆ ತಿಳಿದಿದ್ದರಿಂದ ಈ ಪ್ರಶ್ನೆಯನ್ನ ನನ್ನ ಮುಂದೆ ಇಟ್ಟಿದ್ದರು ಎಂದು ಹೇಳಿದ್ದಾರೆ.

ಬೋಬ್ಡೆ ಅವರ ಈ ಪ್ರಸ್ತಾಪಕ್ಕೆ ಶಾರೂಕ್​ ಖಾನ್​ ಕೂಡ ಒಪ್ಪಿಗೆ ನೀಡಿದ್ದರು. ಅಲ್ಲದೇ ರಾಮಮಂದಿರಕ್ಕೆ ಮುಸ್ಲಿಂ ಬಾಂಧವರೇ ಅಡಿಪಾಯ ಹಾಕುವಂತಾಗಬೇಕೆಂದೂ ಖಾನ್​ ಹೇಳಿದ್ದರು. ಆದರೆ ಈ ಮಧ್ಯಸ್ಥಿಕೆ ಪ್ರಕ್ರಿಯೆ ವಿಫಲವಾಗಿದ್ದರಿಂದ ಈ ಯೋಜನೆಯನ್ನ ಕೈಬಿಡಲಾಯ್ತು. ಆದರೆ ಕೋಮುವಾದಗಳನ್ನ ಹತ್ತಿಕ್ಕಲು ಬೋಬ್ಡೆ ಮಾಡುತ್ತಿದ್ದ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ ಎಂದು ವಿಕಾಸ್​ ಸಿಂಗ್​ ಹೇಳಿದ್ರು.

ಮಾರ್ಚ್​ 2019ರಲ್ಲಿ ನಿರ್ಮಾಣವಾದ ಈ ಮಧ್ಯಸ್ಥಿಕೆ ಸಮಿತಿಯಲ್ಲಿ ಆರ್ಟ್ ಆಫ್​ ಲಿವಿಂಗ್​ ಫೌಂಡೇಶನ್​ನ ಶ್ರೀ ಶ್ರೀ ರವಿಶಂಕರ್​ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್​ ಪಾಂಚು ಇದ್ದರು, ಸಿಜೆಐ ರಂಜನ್​ ಗೊಗೋಯ್​ ನೇತೃತ್ವದ ಪಂಚಪೀಠ ಈ ಸಮಿತಿಯನ್ನ ರಚಿಸಿತ್ತು .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...