
ಮಂಡ್ಯ: ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತಿಸಲಾಗಿದ್ದು, ನಟ ನಾಗಚೈತನ್ಯ ಅಭಿನಯದ ತೆಲುಗು ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಸ್ಮಾರಕವನ್ನು ಬಾರ್ ಆಗಿ ಮಾರ್ಪಡಿಸಿದ್ದಕ್ಕೆ ತೆಲುಗು ಚಿತ್ರತಂಡದ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದು, ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಗೋಪುರ ಸ್ಥಳದ ಬಳಿ ಚಿತ್ರೀಕರಣದ ವೇಳೆ ಘಟನೆ ನಡೆದಿದೆ.
ಪ್ರಾಚ್ಯ ಸ್ಮಾರಕದ ಬಳಿ ಬಾರ್ ಸೆಟ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕ್ಷೇತ್ರ ಅಪಮಾನ ಮಾಡಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಗಚೈತನ್ಯ ನಟನೆಯ ತೆಲುಗು ಚಿತ್ರದ ಶೂಟಿಂಗ್ ವೇಳೆ ಘಟನೆ ನಡೆದಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.