ನವದೆಹಲಿ: ಮಾರ್ಚ್ ನಿಂದಲೂ ಸ್ಥಗಿತಗೊಂಡಿರುವ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಸೀಟುಗಳ ಅಂತರ, ಇ – ಟಿಕೆಟ್ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಿದ್ದು, ಆಗಸ್ಟ್ 1 ರಿಂದ ಸಿನಿಮಾ ಪ್ರದರ್ಶನಕ್ಕೆ ಒಪ್ಪಿಗೆ ನೀಡಬೇಕೆಂದು ಮಲ್ಟಿಪ್ಲೆಕ್ಸ್ ಗಳಿಂದ ಮನವಿ ಮಾಡಲಾಗಿದೆ.
ಸೀಟುಗಳ ನಡುವೆ ಅಂತರ ಹೆಚ್ಚಳ, ಮಧ್ಯಂತರ ಅವಧಿ ಬದಲು, ಆಗಾಗ ಸ್ವಚ್ಛತೆ, ಎಲ್ಲಾ ಪ್ರೇಕ್ಷಕರ ಉಷ್ಣಾಂಶ ಪರೀಕ್ಷೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾಮಾಜಿಕ ಅಂತರ, ಪೇಪರ್ ಲೆಸ್ ಟಿಕೆಟ್ ಮೊದಲಾದ ಕ್ರಮಕೈಗೊಳ್ಳಲಾಗುವುದು. ಆಗಸ್ಟ್ 1ರಿಂದ ಚಿತ್ರಮಂದಿರ ಪುನಾರಂಭಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿದೆ.
ಆಗಸ್ಟ್ 1 ರಿಂದ ಅನ್ ಲಾಕ್ 3.0 ಆರಂಭವಾಗಲಿದ್ದು, ಈ ವೇಳೆ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದೆ ನಿರೀಕ್ಷೆಯಲ್ಲಿ ಮಲ್ಟಿಪ್ಲೆಕ್ಸ್ ಗಳಿಂದ ಸಿದ್ಧತೆ ಆರಂಭಿಸಲಾಗಿದೆ.