alex Certify ಭಾವನಾತ್ಮಕ ಬರಹದೊಂದಿಗೆ ‘ಅಪ್ಪು’ಗೆ ಹೊಸ ಸಿನಿಮಾ ಅರ್ಪಿಸಿದ ರಾಘಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವನಾತ್ಮಕ ಬರಹದೊಂದಿಗೆ ‘ಅಪ್ಪು’ಗೆ ಹೊಸ ಸಿನಿಮಾ ಅರ್ಪಿಸಿದ ರಾಘಣ್ಣ

ನಟ ರಾಘವೇಂದ್ರ ರಾಜಕುಮಾರ್ ಅವರ ಹೊಸ ಸಿನಿಮಾ ನಿರ್ಮಾಣವಾಗ್ತಿದ್ದು, ಅದನ್ನು ಸೋದರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದ್ದಾರೆ.

ನಿನ್ನ ಆರೈಕೆಯಿಂದಲೇ ಹೊಸ ಚೈತನ್ಯ ಸಿಕ್ಕಿದ್ದು ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ. ‘ಕರ್ನಾಟಕದ ಅಳಿಯ’ ಎಂಬ ಹೊಸ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

ಈ ಕುರಿತಾಗಿ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ‘ನಿನ್ನಿಂದಲೇ ನಾನು ಹುಷಾರಾಗಿದ್ದು, ನಿನ್ನ ಆರೈಕೆಯಿಂದಲೇ ಹೊಸ ಚೈತನ್ಯ ಸಿಕ್ಕಿದ್ದು, ನಿನ್ನ ಸಹಕಾರದಿಂದಲೇ ಮತ್ತೆ ಸಿನಿಮಾ ಮಾಡುತ್ತಿರುವುದು, ನೀನೇ ಈ ಸಿನಿಮಾ ಕಥೆ, ಟೈಟಲ್ ಬಹಳ ಮೆಚ್ಚಿದ್ದು, ಈಗ ನೀನೇ ಹೇಳದೇ ಕೇಳದೇ ನಮ್ಮನ್ನು ಬಿಟ್ಟು ಹೋಗಿರೋದು, ಈ ಸಿನಿಮಾ ನಿನಗೆ ಅರ್ಪಣೆ’ ಎಂದು ಪೋಸ್ಟ್ ಹಾಕಿದ್ದಾರೆ.

ಪ್ರಥಮ್ ನಿರ್ದೇಶನ, ಅಣಜಿ ನಾಗರಾಜ್ ಛಾಯಾಗ್ರಹಣದಲ್ಲಿ ‘ಕರ್ನಾಟಕದ ಅಳಿಯ’ ಮೂಡಿ ಬರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...