![Chrissy Teigen Just Received a 'Placenta Cake' ahead of Her Third Baby and it's 'Disgusting'](https://images.news18.com/ibnlive/uploads/2020/09/1601105940_chrissy.jpeg)
ಅಮೆರಿಕಾದ ಸಂಗೀತಗಾರ ಜಾನ್ ಲೆಜೆಂಡ್ ಪತ್ನಿ, ರೂಪದರ್ಶಿ ಕ್ರಿಸ್ಸಿಟೇಗನ್ ಮೂರನೇ ಮಗುವಿನ ಕನವರಿಕೆಯಲ್ಲಿದ್ದು, ತುಂಬುಗರ್ಭಿಣಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ.
ಕ್ರಿಸ್ಸಿಯನ್ನು ಖುಷಿಪಡಿಸಲು ಅಭಿಮಾನಿಗಳು ಒಂದಿಲ್ಲೊಂದು ಅಚ್ಚರಿಯ ಉಡುಗೊರೆಗಳನ್ನು ಕಳುಹಿಸಿಕೊಡುತ್ತಿದ್ದು, ಅಭಿಮಾನಿಯೊಬ್ಬ ಹೊಕ್ಕುಳ ಬಳ್ಳಿಯ ಕೇಕ್ ಕಳುಹಿಸಿಕೊಟ್ಟಿದ್ದಾನೆ.
ಕೇಕ್ ಮೇಲೆ ಬರಹವೂ ಇದ್ದು, ಕ್ರಿಸ್ಸಿ, ನನಗೆ ಗೊತ್ತು ನಿನ್ನ ಹೊಕ್ಕುಳಬಳ್ಳಿ ಕರಗುತ್ತದೆಂದು. ಹೀಗಾಗಿ ನಾನು ಹೊಸತೊಂದು ತಂದಿದ್ದೇನೆ ಎಂದು ಬರೆದಿದೆ. ಟ್ವಿಟ್ಟರ್ ನಲ್ಲಿ ಇದನ್ನು ಪೋಸ್ಟ್ ಮಾಡಿರುವ ಕ್ರಿಸ್ಸಿ, ಒ ಮೈ ಗಾಡ್ ಎಂದು ಬರೆದುಕೊಂಡಿದ್ದಾರೆ.
ಕ್ರಿಸ್ಸಿಯ ಟ್ವಿಟ್ಟರ್ ಅನುಯಾಯಿಗಳು, ಅಭಿಮಾನಿಗಳು ಅಮೆರಿಕಾ ಮಾತ್ರವಲ್ಲದೆ, ಭಾರತದಲ್ಲೂ ಇದ್ದಾರೆ. ಹಿಂದೊಮ್ಮೆ ನಾನು ಮೊದಲ ಬಾರಿಗೆ ಗುಲಾಬ್ ಜಾಮೂನ್ ಮಾಡಬೇಕೆಂದಿದ್ದೇನೆ. ಪಾಕ ವಿಧಾನ ತಿಳಿಸಿಕೊಡಿ ಎಂದು ಟ್ವೀಟ್ ಮಾಡಿದ್ದರು.