ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗದ ಕಾರ್ಮಿಕರಿಗೆ ಉಚಿತ ಲಸಿಕೆ ಅಭಿಯಾನ ಆರಂಭಿಸಿದ್ದಾರೆ. ಕಳೆದ ವರ್ಷ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿದ್ದ ಅವರು ಈಗ ಉಚಿತ ಲಸಿಕೆ ವ್ಯವಸ್ಥೆ ಮಾಡಿದ್ದಾರೆ.
ಚಿರಂಜೀವಿ ಅವರ ಕೊರೋನಾ ಕ್ರೈಸಿಸ್ ಚಾರಿಟಿ ಸಂಸ್ಥೆ ಮೂಲಕ ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಕೋವಿಡ್ ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ. 45 ವರ್ಷ ದಾಟಿದ ಚಿತ್ರರಂಗದ ಕಾರ್ಮಿಕರು, ಸಿನಿಮಾ ಪತ್ರಕರ್ತರು ಲಸಿಕೆ ಪಡೆದುಕೊಳ್ಳುವಂತೆ ಚಿರಂಜೀವಿ ಮನವಿ ಮಾಡಿದ್ದಾರೆ.