
ಬೆಂಗಳೂರು: ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ 2017 ರ ಅಕ್ಟೋಬರ್ ನಲ್ಲಿ ನಟಿ ಮೇಘನಾ ರಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು 2018 ರ ಮೇ 2 ರಂದು ಅದ್ದೂರಿಯಾಗಿ ಮದುವೆ ನಡೆದಿತ್ತು.
ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾದ ಚಿರಂಜೀವಿ ಸರ್ಜಾ ಮಗುವನ್ನು ನೋಡುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಮೇಘನಾ –ಚಿರು ಅವರ ಪ್ರೀತಿಯ ಕೊಡಿ ಚಿಗುರೊಡೆಯುತ್ತಿದೆ. ಮೇಘನಾ ರಾಜ್ 4 ತಿಂಗಳ ಗರ್ಭಿಣಿಯಾಗಿದ್ದು ಮಗುವಿನ ಮುಖ ನೋಡುವ ಮೊದಲೇ ಚಿರು ಇಹಲೋಕ ತ್ಯಜಿಸಿದ್ದಾರೆ.
ಅಪಾರ ಅಭಿಮಾನಿಗಳು, ಬಂಧು, ಬಳವನ್ನು ಅಗಲಿದ್ದಾರೆ.