ಕಾಮಿಡಿ ಸ್ಟಾರ್ ಚಿಕ್ಕಣ್ಣ ಮತ್ತು ‘ಟಗರು’ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ.
ಚಿಕ್ಕಣ್ಣ ಮತ್ತು ತ್ರಿವೇಣಿ ಅವರು ವಧು ವರರ ಡ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದ್ದರಿಂದ ಅನೇಕರು ಶುಭಾಶಯ ಹೇಳಿದ್ದಾರೆ. ಆದರೆ ಇದೆಲ್ಲವೂ ಸುಳ್ಳು ಸುದ್ದಿ ಎಂದು ತ್ರಿವೇಣಿ ಅವರು ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಣ್ಣನವರ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಹೇಳಲು ಆ ಫೋಟೋ ಶೇರ್ ಮಾಡಿದ್ದು, ಇದರಿಂದಾಗಿ ಚಿಕ್ಕಣ್ಣ ಮತ್ತು ನನಗೆ ಮದುವೆಯಾಗಿದೆ ಎನ್ನುವ ಸುದ್ದಿ ಹರಿದಾಡಿ ಟ್ರೋಲ್ ಮಾಡಲಾಗುತ್ತಿದೆ. ನಮಗೆ ಮದುವೆಯಾಗಿಲ್ಲ. ಸಿನಿಮಾವೊಂದರ ದೃಶ್ಯದ ಫೋಟೋ ಇದಾಗಿದ್ದು ಯಾರು ಇದನ್ನು ನಂಬಬೇಡಿ. ನನಗೆ ನಿಶ್ಚಯವಾದಲ್ಲಿ ಎಲ್ಲರಿಗೂ ಹೇಳುತ್ತೇನೆ. ಸುಳ್ಳುಸುದ್ದಿ ಹಬ್ಬಿಸಬಾರದು ಎಂದು ಮನವಿ ಮಾಡಿದ್ದಾರೆ.
https://www.instagram.com/p/CB9k7DjgMUf/?utm_source=ig_embed