![](https://kannadadunia.com/wp-content/uploads/2021/03/ca816cd0-80f9-428f-8f3a-7bcce01907dd.jpg)
ಉದ್ಯಮಿಯೊಬ್ಬರಿಗೆ 26.2 ಕೋಟಿ ರೂ. ವಂಚನೆ ಮಾಡಿದ ಆರೋಪದ ಮೇಲೆ ತಮಿಳು ಚಿತ್ರರಂಗದ ಹಿರಿಯ ನಟಿ ಜಯಚಿತ್ರರ ಪುತ್ರನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ತಮಿಳು ಚಿತ್ರವೊಂದರಲ್ಲಿ ನಟಿಸಿರುವ ಅಮ್ರೇಶ್ ಗಣೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿ ನೆಡುಮಾರನ್ ವಲಸರವಕ್ಕಮ್ (68) ಎಂಬ ಹೆಸರಿನ ಉದ್ಯಮಿಗೆ ಇರಿಡಿಯಮ್‌ನಿಂದ ಮಾಡಿರುವ ದೇಗುಲದ ಕಳಶ ಕೊಡಿಸುವುದಾಗಿ ಅಮ್ರೇಶ್ ಮಾತು ಕೊಟ್ಟು, ಆತನಿಂದ ದುಡ್ಡು ಪಡೆದಿದ್ದ. 2013ರಿಂದ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಅಮ್ರೇಶ್ ಹಾಗೂ ಆತನ ಸಹಚರರು ನೆಡುಮಾರನ್ ಬಳಿ ದುಡ್ಡು ಕಿತ್ತಿದ್ದಾರೆ.
‘ಹೀರೋ’ ಚಿತ್ರದ ನೆನಪಿನ ಹುಡುಗಿಯೇ ವಿಡಿಯೋ ಸಾಂಗ್ ರಿಲೀಸ್
ಆದರೆ ತನಗೆ ಕೊಟ್ಟ ಮಾತಿನಂತೆ ಕಳಶ ಕೊಡದೇ ಇದ್ದ ವೇಳೆ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮ್ರೇಶ್‌ನನ್ನು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.