
ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮಲೆಮಾದೇಶ್ವರ ಸ್ವಾಮಿ ಭಕ್ತಿಗೀತೆಯನ್ನು ಅಶ್ಲೀಲವಾಗಿ ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಅವರು ಬಿಡುಗಡೆ ಮಾಡಿದ್ದ ‘ಕೋಲು ಮಂಡೆ’ ಹಾಡನ್ನು ಯೂಟ್ಯೂಬ್ ನಿಂದ ತೆಗೆದುಹಾಕಲಾಗಿದೆ.
ಆಗಸ್ಟ್ 22 ರಂದು ಚಂದನ್ ಶೆಟ್ಟಿ ‘ಕೋಲುಮಂಡೆ ಜಂಗಮ ದೇವರು’ ರ್ಯಾಪ್ ಸಾಂಗ್ ಬಿಡುಗಡೆ ಮಾಡಿದ್ದರು. ಇದರಲ್ಲಿ ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ ಎಂದು ಮಲೆ ಮಾದೇಶ್ವರ ಸ್ವಾಮಿಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಭಕ್ತಿಗೀತೆಯನ್ನು ತಿರುಚಲಾಗಿದ್ದು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದ್ದು, ಇದಾದ ನಂತರ ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ದು ಯೂಟ್ಯೂಬ್ ನಿಂದ ಹಾಡನ್ನು ತೆಗೆದುಹಾಕಲಾಗಿದೆ.