ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಗಳಿಕೆಯಲ್ಲಿ ಮತ್ತೊಂದು ದಾಖಲೆ ಬರೆದಿದೆ.
18 ದಿನಗಳ ಅವಧಿಯಲ್ಲಿ ‘ರಾಬರ್ಟ್’ ಬರೋಬ್ಬರಿ 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ದಿನವೇ ದಾಖಲೆಯ 17.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ‘ರಾಬರ್ಟ್’ ನಾಲ್ಕನೇ ದಿನಕ್ಕೆ 59.10 ಕೋಟಿ ರೂ. ಗಳಿಸಿತ್ತು. 7 ನೇ ದಿನಕ್ಕೆ 71 ಕೋಟಿ ರೂ. ಕಲೆಕ್ಷನ್ ಮಾಡಿದ್ದು, 18ನೇ ದಿನಕ್ಕೆ 100 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.
ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದ್ದ ‘ರಾಬರ್ಟ್’ ಬೆಂಗಳೂರು, ಕೋಲಾರ, ತುಮಕೂರು ಏರಿಯಾದಲ್ಲಿ 30 ಕೋಟಿ ರೂಪಾಯಿ ಗಳಿಸಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಪ್ರದೇಶದಲ್ಲಿ 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ದಾವಣಗೆರೆ, ಚಿತ್ರದುರ್ಗದಲ್ಲಿ 15 ಕೋಟಿ ರೂ., ಶಿವಮೊಗ್ಗದಲ್ಲಿ 9 ಕೋಟಿ ರೂ., ಕಲ್ಯಾಣ ಕರ್ನಾಟಕದಲ್ಲಿ 13 ಕೋಟಿ ರೂ., ಬಾಂಬೆ ಕರ್ನಾಟಕದಲ್ಲಿ 9 ಕೋಟಿ ರೂ. ಕರೆಕ್ಷನ್ ಮಾಡಿದೆ. ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಕೂಡ 100 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ‘ರಾಬರ್ಟ್’ ಮೂರು ವಾರ ಯಶಸ್ವಿಯಾಗಿ ಪೂರೈಸಿ 25 ನೇ ದಿನದತ್ತ ಸಾಗುತ್ತಿದೆ. 100 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ಸಂಭ್ರಮಾಚಾರಣೆ ನಡೆಸಲಾಗಿದೆ.