ಕೋವಿಡ್ ಲಸಿಕೆ ಹಾಕಿಸಿಕೊಂಡ ಕೆನಡಾದ ನೃತ್ಯಗಾರ ಗುರ್ದೀಪ್ ಪಂಧೆರ್ ಇದೇ ಖುಷಿಯಲ್ಲಿ ಭಾಂಗ್ರಾ ನೃತ್ಯ ಮಾಡಿ ಅದರ ವಿಡಿಯೋ ಮಾಡಿಕೊಂಡು ಜನರಲ್ಲಿ ಸಕಾರಾತ್ಮಕತೆ ಹಾಗೂ ಸಂತಸ ಹಂಚಲು ಮುಂದಾಗಿದ್ದಾರೆ.
ಯುಕೋನ್ನ ಹೆಪ್ಪುಗಟ್ಟಿದ ಕೊಳವೊಂದರಲ್ಲಿ ಭಾಂಗ್ರಾ ಸ್ಟೆಪ್ಗಳನ್ನು ಹಾಕುತ್ತಿರುವ ತನ್ನ 55 ಸೆಕೆಂಡ್ಗಳ ವಿಡಿಯೋವನ್ನು ಗುರ್ದೀಪ್, ಲಸಿಕೆ ತೆಗೆದುಕೊಂಡ ಘಳಿಗೆಯನ್ನು ಈ ರೀತಿ ಸಂಭ್ರಮಿಸಿದ್ದಾರೆ.
ಉದ್ಯೋಗಿಗಳ ಕೋವಿಡ್ ಲಸಿಕೆ ವೆಚ್ಚ ಭರಿಸಲಿವೆ ಇನ್ಫೋಸಿಸ್ – ಅಕ್ಸೆಂಚರ್
“ನೆನ್ನೆ ಸಂಜೆ ಕೋವಿಡ್-19 ಲಸಿಕೆ ಹಾಕಿಸಿಕೊಂಡೆ. ಇದಾದ ಮೇಲೆ ಖುಷಿ, ನಂಬಿಕೆ ಹಾಗೂ ಸಕಾರಾತ್ಮಕತೆ ತುಂಬಿಸಲು ಹೆಪ್ಪುಗಟ್ಟಿದ ಕೆರೆಯ ಮೇಲೆ ಭಾಂಗ್ರಾ ಮಾಡಲು ಹೋದೆ. ಪ್ರತಿಯೊಬ್ಬರ ಆರೋಗ್ಯ ಹಾಗೂ ಕ್ಷೇಮಕ್ಕಾಗಿ ಕೆನಡಾದ ಉದ್ದಗಲಕ್ಕೂ ಹಬ್ಬಿಸುತ್ತಿದ್ದೇನೆ” ಎಂದು ತಮ್ಮ ಪೋಸ್ಟ್ನಲ್ಲಿ ಕ್ಯಾಪ್ಷನ್ ಹಾಕಿದ್ದರು.