ಟೆಕ್ಸಾಸ್: ಬಾಲಕನೊಬ್ಬ ತನ್ನ ಅಕ್ಕನ ಮದುವೆಯಲ್ಲಿ ಅದ್ಭುತ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆರಿಕಾದ ಟೆಕ್ಸಾಸ್ ನಲ್ಲಿ ಜುಲೈ 25 ರಂದು ನಡೆದ ಮದುವೆ ಸಮಾರಂಭದಲ್ಲಿ ಬಾಲಕ ಕೋಲ್ಬೆ ಅತಿಥಿಗಳ ಎದುರು ಮೇಗನ್ ಥೀ ಸ್ಟಾಲಿನ್ ಹಾಗೂ ಬಿಯೋನ್ಸ್ ಅವರ ಸೇವೇಜ್ ಹಾಡಿಗೆ ವಿಭಿನ್ನ ಸ್ಟೆಪ್ ಹಾಕಿದ್ದಾನೆ.
ವಿವಾಹ ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಆತನ ಸುತ್ತ ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ಸನ್ನಿವೇಶವನ್ನು ಸ್ಥಳದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮದುವೆ ಎಂಬುದು ವಧು, ವರರ ಜೀವನದಲ್ಲಿ ಮರೆಯಲಾಗದ ಕ್ಷಣ. ಬಾಲಕ ಅದನ್ನು ನೃತ್ಯದ ಮೂಲಕ ಮತ್ತಷ್ಟು ಅವಿಸ್ಮರಣೀಯವಾಗಿ ಮಾಡಿದ್ದಾನೆ. ಆ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 2 ಮಿಲಿಯನ್ ಗೂ ಅಧಿಕ ಜನ ವಿಡಿಯೋ ವೀಕ್ಷಿಸಿದ್ದಾರೆ. ಅಲ್ಲದೆ ಇನ್ಸ್ ಸ್ಟಾಗ್ರಾಂ ಪೇಜ್ ನಲ್ಲೂ ಅಪ್ಲೋಡ್ ಮಾಡಲಾಗಿದೆ. “ಬಾಲಕ ಸಾರ್ವಕಾಲಿಕ ಉತ್ತಮ ಡಾನ್ಸರ್” ಎಂದು ಒಬ್ಬರು, “ಸಹೋದರ ನೀನು ಪ್ರಸಿದ್ಧಿ ಪಡೆಯುತ್ತೀಯ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?time_continue=7&v=bTnnIGZjwYo&feature=emb_logo
https://www.instagram.com/p/CDIMtprAnsK/?utm_source=ig_embed